ಮೂರು ವರ್ಷಗಳಲ್ಲಿ 1537 ಕಸ್ಟಡಿ ಸಾವು, ದೌರ್ಜನ್ಯ ಪ್ರಕರಣ

Prasthutha|

ನವದೆಹಲಿ, ಆ.3: ಕಳೆದ ಮೂರು ವರ್ಷಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಒಟ್ಟು 1537 ಪೊಲೀಸ್ ದೌರ್ಜನ್ಯ ಮತ್ತು ಕಸ್ಟಡಿ ಸಾವು ಪ್ರಕರಣ ನಡೆದಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದೆ.

- Advertisement -

ಪೊಲೀಸ್ ಕಸ್ಟಡಿಯಲ್ಲಿ 2018-19ರಲ್ಲಿ 136 ಮಂದಿ, 2019-20ರಲ್ಲಿ 112 ಮಂದಿ ಹಾಗೂ 2020-21ರಲ್ಲಿ 100 ಮಂದಿ ಸಾವನ್ನಪ್ಪಿದ್ದಾರೆ.

ಪೊಲೀಸ್ ಕಸ್ಟಡಿಯಲ್ಲಿ  ನಡೆದ ದೌರ್ಜನ್ಯ ಪ್ರಕರಣ, 2018-19ರಲ್ಲಿ 542, 2019-20ರಲ್ಲಿ 411 ಮತ್ತು 2020-21ರಲ್ಲಿ 236 ಪ್ರಕರಣಗಳು ವರದಿಯಾಗಿವೆ.

- Advertisement -

ಒಟ್ಟಾರೆ 2018ರಲ್ಲಿ 678 ಹಾಗೂ 2019-20ರಲ್ಲಿ 523 ಹಾಗೂ 2020-21ರಲ್ಲಿ 336 ಪೊಲೀಸ್ ಕಸ್ಟಡಿಯಲ್ಲಿ ದೌರ್ಜನ್ಯ ಮತ್ತು ಸಾವು ಪ್ರಕರಣಗಳು ವರದಿಯಾಗಿವೆ.



Join Whatsapp