ಭಾರೀ ವಿರೋಧದ ನಡುವೆ ರಕ್ಷಣಾ ಸೇವಾ ಮಸೂದೆ -2021 ಸಂಸತ್ ನಲ್ಲಿ ಅಂಗೀಕಾರ

Prasthutha|

ನವದೆಹಲಿ, ಆಗಸ್ಟ್ 3: ಅಗತ್ಯ ರಕ್ಷಣಾ ಸೇವಾ ಮಸೂದೆ 2021 ಅನ್ನು ಪ್ರತಿಪಕ್ಷಗಳ ಭಾರೀ ವಿರೋಧದ ನಡುವೆ ಲೋಕಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಯಿತು.

- Advertisement -

ವಿರೋಧ ಪಕ್ಷಗಳ ಸದಸ್ಯರು ವಿವಿಧ ವಿಷಯಗಳ ವಿರುದ್ಧದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಲಾಗಿತ್ತು.

ಮಧ್ಯಾಹ್ನ 2 ಗಂಟೆಗೆ ಸದನ ಮತ್ತೆ ಸಭೆ ಸೇರುತ್ತಿದ್ದಂತೆ ಸ್ಪೀಕರ್ ಓಂ ಬಿರ್ಲಾ ರವರು ಪ್ರತಿಭಟನಾ ನಿರತ ಸದಸ್ಯರಿಗೆ ತಮ್ಮ ಸ್ಥಾನಗಳಿಗೆ ವಾಪಸ್ ಹೋಗುವಂತೆ ವಿನಂತಿಸಿದರೂ ಪೆಗಾಸೆಸ್ ಕದ್ದಾಲಿಕೆ ಮತ್ತು ವಿವಾದಾತ್ಮಕ ಕೃಷಿಕಾಯ್ದೆ ವಿರುದ್ಧ ಪ್ರತಿಭಟನೆಯನ್ನು ಮುಂದುವರಿಸಿದರು.

- Advertisement -


ಪ್ರತಿಪಕ್ಷಗಳ ಗದ್ದಲದ ನಡುವೆ ಅಗತ್ಯ ರಕ್ಷಣಾ ಸೇವಾ ಮಸೂದೆ 2021 ಅನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.
ಬೆಳಿಗ್ಗೆ 11 ಘಂಟೆಗೆ ಸದನ ಸಭೆ ಸೇರಿದಾಗ ಪೆಗಾಸೆಸ್ ಕಣ್ಗಾವಲು ಮತ್ತು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಪಕ್ಷಗಳು ಬಾವಿಗಿಳಿದು ಪ್ರತಿಭಟಿಸಿದರು. ಈ ಹಿನ್ನೆಲೆಯಲ್ಲಿ ಸ್ಪೀಕರ್ ಅವರು ಸದನವನ್ನು ಮಧ್ಯಾಹ್ನದ ವರೆಗೆ ಮುಂದೂಡಿದ್ದರು.


ಜುಲೈ 19 ರಂದು ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಪೆಗಾಸೆಸ್ ಕಣ್ಗಾವಲು ಮತ್ತು ಕೃಷಿ ಕಾನೂನುಗಳ ಕುರಿತು ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಪ್ರತಿಭಟನೆಯಿಂದಾಗಿ ಸದನದ ಅನೇಕ ಕಲಾಪಗಳು ಹಾಳಾಗಿವೆ.



Join Whatsapp