ನಾಲ್ಕಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬಕ್ಕೆ ವಿವಿಧ ರೀತಿಯ ನೆರವು: ಕೇರಳ ಚರ್ಚ್ ನಿಂದ ಆಫರ್

Prasthutha|

ತಿರುವನಂತಪುರಂ, ಆ. 2: ಜನಸಂಖ್ಯೆ ನಿಯಂತ್ರಣಕ್ಕೆ ಇತರ ರಾಜ್ಯಗಳು ಕ್ರಮಕೈಗೊಳ್ಳಲು ಮುಂದಾಗಿರುವಾಗಲೇ , ಕೇರಳದ ಕ್ಯಾಥೋಲಿಕ್ ಚರ್ಚ್ ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ವಿವಿಧ ರೀತಿಯ ನೆರವು ಘೋಷಿಸಿದೆ.
ರಾಜ್ಯದಲ್ಲಿ ಕ್ರೈಸ್ತರ ಪ್ರಾಬಲ್ಯ ಹೆಚ್ಚಿಸಲು ಚರ್ಚ್ ಗಳು ನೆರವಾಗುತ್ತಿವೆ ಎಂಬ ಹಿಂದೂ ಸಂಘಟನೆಗಳ ಆರೋಪಗಳ ನಡುವೆಯೇ ಚರ್ಚ್ನಿಂದ ಇಂಥದ್ದೊಂದು ಆಫರ್ ನೀಡಲಾಗಿದೆ. ಸಿರೋ ಮಲಬಾರ್ ಪಾಲಾ ಡಿಯಾಸಿಸ್ ( ಧರ್ಮ ಪ್ರಾಂತ್ಯ)ದ ವ್ಯಾಪ್ತಿಯಲ್ಲಿ ದೊಡ್ಡ ಕುಟುಂಬಗಳಿಗೆ ನೆರವನ್ನು ಪ್ರಕಟಿಸಿದ ಬೆನ್ನಲ್ಲೇ , ಪಟ್ಟಣಂತಿಟ್ಟದಲ್ಲಿರುವ ಸಿರೋ ಮಲಂಕರ ಕ್ಯಾಥೋಲಿಕ್ ಚರ್ಚ್ ನ ಮುಖ್ಯ ಬಿಷಪ್, ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದುವ ಕುಟುಂಬಕ್ಕೆಮಾಸಿಕ 2000 ರೂ. ಹಣಕಾಸು ನೆರವು ನೀಡಲಾಗುವುದು ಎಂದು ಘೋಷಿಸಿದ್ದಾರೆ.

- Advertisement -

ನೆರವಿನಲ್ಲಿ ಪ್ರಮುಖವಾಗಿ, ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದುವ ಕುಟುಂಬಕ್ಕೆಮಾಸಿಕ 2000 ರು. ಹಣಕಾಸು ನೆರವು, ಆಧ್ಯಾತ್ಮಿಕ ಅಗತ್ಯ ಪೂರೈಸಲು ಫಾದರ್, ದಾದಿಯರ ಸೇವೆ ಒದಗಿಸಲಾಗುತ್ತದೆ, ಸ್ಥಳೀಯ ಚರ್ಚ್ ಗಳ ವಾರ್ಷಿಕ ಮಿಲನ ಕೂಟದಲ್ಲಿ ಭಾಗಿಯಾಗುತ್ತಾರೆ, ಉದ್ಯೋಗಗಳು ಮತ್ತು ಶಾಲೆ ಪ್ರವೇಶದಲ್ಲಿ ಈ ಕುಟುಂಬಗಳಿಗೆ ಆದ್ಯತೆ ಮುಂತಾದವು ಸೇರಿವೆ.



Join Whatsapp