ಕಾಬೂಲ್ , ಆಗಸ್ಟ್ 1 : ಅಫ್ಘಾನಿಸ್ತಾನದ ದಕ್ಷಿಣ ಭಾಗದಲ್ಲಿರುವ ಕಂದಹಾರ್ ವಿಮಾನ ನಿಲ್ದಾಣದ ಮೇಲೆ ಇಂದು ರಾಕೆಟ್ ದಾಳಿ ನಡೆದಿದೆ.
ವಿಮಾನ ನಿಲ್ದಾಣದ ಒಳಗೆ ಕನಿಷ್ಠ 3 ರಾಕೆಟ್ ಗಳು ನುಗ್ಗಿದ್ದು, ಅಫ್ಘಾನ್ ಸೇನೆಯು ತಾಲಿಬಾನ್ ಪಡೆಗಳ ವಿರುದ್ಧ ನಡೆಸುತ್ತಿರುವ ವಾಯು ದಾಳಿಯನ್ನು ತಡೆಯುವ ಸಲುವಾಗಿ ತಾಲಿಬಾನ್ ಈ ಪ್ರತಿ ದಾಳಿ ನಡೆಸಿದೆಯೆಂದು ಹೇಳಲಾಗುತ್ತಿದೆ.
ತಾಲಿಬಾನ್ ಪಡೆ ನಡೆಸಿದ ಈ ದಾಳಿಯಿಂದಾಗಿ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆಯೆಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ. ರಾಕೆಟ್ ದಾಳಿಯಿಂದಾಗಿ ರನ್ ವೇ ಹಾನಿಯಾಗಿದ್ದು, ಯಾವುದೇ ಸಾವು – ನೋವು ನಡೆದಿಲ್ಲವೆಂದು ಸ್ಪಷ್ಟಪಡಿಸಿದೆ.
ಅಫ್ಘಾನ್ ಸೇನೆಯು ಕಂದಹಾರ್ ವಿಮಾನ ನಿಲ್ದಾಣದ ಮೂಲಕ ತಾಲಿಬಾನ್ ಪಡೆಗಳ ಮೇಲೆ ವಾಯುದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ಪ್ರತಿ ದಾಳಿ ಸಂಘಟಿಸಿದ್ದೇವೆಂದು ತಾಲಿಬಾನ್ ವಕ್ತಾರ ಮಾಧ್ಯಮಕ್ಕೆ ತಿಳಿಸಿದ್ದಾರೆ.