ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತನ ಮನೆಗೆ ಯಡಿಯೂರಪ್ಪ ಭೇಟಿ | ಕುಟುಂಬಕ್ಕೆ ಸಾಂತ್ವನ

Prasthutha|

ಗುಂಡ್ಲುಪೇಟೆ, ಜು.30: ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಕಟ್ಟಾ ಬೆಂಬಲಿಗ ಗುಂಡ್ಲುಪೇಟೆಯ ಬೊಮ್ಮಲಾಪುರ ಗ್ರಾಮದ ಬಿಜೆಪಿ ಕಾರ್ಯಕರ್ತ ರವಿ ಅವರ ಮನೆಗೆ ಶುಕ್ರವಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡಿ ಸಾಂತ್ವನ ಹೇಳಿದರು.

- Advertisement -


ಆತ್ಮಹತ್ಯೆ ವಿಷಯ ತಿಳಿದ ತಕ್ಷಣ ಯಡಿಯೂರಪ್ಪ ಅವರು ಕುಟುಂಬ ಸದಸ್ಯರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಸಾಂತ್ವನ ಹೇಳಿ ಧೈರ್ಯ ತುಂಬಿದ್ದರು. ಮಾತ್ರವಲ್ಲ ಶೀಘ್ರ ಮನೆಗೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಗುಂಡ್ಲುಪೇಟೆ ಆಗಮಿಸಿದಾಗ ರವಿ ಅವರ ಮನೆಗೆ ಆಗಮಿಸಿದ್ದಾರೆ.



Join Whatsapp