ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ SDPI ನಿಯೋಗ

Prasthutha|

ನವದೆಹಲಿ, ಜು.30: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (SDPI) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಇಲ್ಯಾಸ್ ತುಂಬೆ, ಅಬ್ದುಲ್ ಮಜೀದ್ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ಡಾ.ತಸ್ಲೀಂ ರಹ್ಮಾನಿಯವರನ್ನೊಳಗೊಂಡ ನಿಯೋಗ ಇತ್ತೀಚೆಗೆ ಮಾಜಿ ಪ್ರಧಾನಿ ದೇವೇಗೌಡರನ್ನು ಅವರ ದೆಹಲಿಯ ಸಫ್ದರ್ ಜಂಗ್ ಲೈನ್ ನಿವಾಸದಲ್ಲಿ ಭೇಟಿ ಮಾಡಿ ವಿವಿಧ ವಿಷಯಗಳ ಬಗ್ಗೆ ಭೇಟಿ ಮಾಡಿ ಚರ್ಚೆ ನಡೆಸಿದೆ.

- Advertisement -

ಇನ್ನೂ ಅಂತ್ಯ ಕಾಣದ ರೈತ ಹೋರಾಟ, ಕೋವಿಡ್ ನಿಯಂತ್ರಣದಲ್ಲಿನ ಸರ್ಕಾರಗಳ ನಿರ್ಲಕ್ಷ, ಪೆಗಾಸಸ್ ಗೂಢಚಾರಿಕೆ ಮತ್ತು ಇನ್ನಿತರ ಪ್ರಸಕ್ತ ದೇಶದ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಅಬ್ದುಲ್ ಮಜೀದ್ ತಿಳಿಸಿದ್ದಾರೆ.

ರಾಷ್ಟ್ರದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿಗಳು, ಬಹುದೊಡ್ಡ ಜನಕ್ರಾಂತಿಯಿಂದ ಮಾತ್ರ ಈ ದೇಶದ ಪ್ರಜಾತಂತ್ರ ಉಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
SDPI ಪಕ್ಷದ ಹೋರಾಟ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಿಮ್ಮ ಸಾಧನೆಗಳನ್ನು ಗಮನಿಸುತ್ತಿದ್ದೇನೆ, ನಿಮ್ಮ ಹೋರಾಟ ಯಶಸ್ವಿಯಾಗಲಿ ಎಂದು ಸಂದರ್ಭ ಹಾರೈಸಿದರು.



Join Whatsapp