ಪೆಗಾಸಸ್ ಸ್ಪೈವೇರ್ ಕಣ್ಗಾವಲು ಪ್ರಕರಣ ಹಿನ್ನೆಲೆಯಲ್ಲಿ ಎನ್.ಎಸ್.ಒ ಕಚೇರಿಗಳ ಮೇಲೆ ಇಸ್ರೇಲ್ ಅಧಿಕಾರಿಗಳ ದಾಳಿ

Prasthutha|

ಜೆರುಸಲೆಂ ಜುಲೈ 29: ಪೆಗಾಸಸ್ ಸ್ಪೈವೇರ್ ಸಾಫ್ಟ್ ವೇರ್ ಮಾರಾಟಗಾರರ ಮೂಲಕ ವಿಶ್ವದಾದ್ಯಂತ ಅನೇಕ ಸರ್ಕಾರಗಳು, ಸಾಮಾಜಿಕ ಹೋರಾಟಗಾರರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಗಣ್ಯರ ಮೇಲೆ ಕಣ್ಗಾವಲು ನಡೆಸುತ್ತಿದೆ ಎಂದು ಮಾಧ್ಯಮ ಸಂಸ್ಥೆಗಳ ಒಕ್ಕೂಟವು ಬಹಿರಂಗಪಡಿಸಿದ ಆತಂಕಕಾರಿ ವರದಿಯಾದರಿಸಿ ಇಸ್ರೇಲ್ ಸರ್ಕಾರಿ ಅಧಿಕಾರಿಗಳು ಎನ್.ಎಸ್.ಒ ಗ್ರೂಪ್ ನ ಕಚೇರಿಗಳ ಮೇಲೆ ಬುಧವಾರ ದಾಳಿ ನಡೆಸಿದ್ದಾರೆ.

- Advertisement -

ಇಸ್ರೇಲ್ ರಕ್ಷಣಾ ಸಚಿವಾಲಯದ ಪ್ರತಿನಿಧಿಗಳು ತಮ್ಮ ಕಚೇರಿಗಳಿಗೆ ಭೇಟಿ ನೀಡಿದ್ದರು” ಎಂದು ಎನ್ಎಸ್ಒ ವಕ್ತಾರರು ಮಾಧ್ಯಮದ ಮೂಲಕ ಖಚಿತಪಡಿಸಿದ್ದಾರೆ. ಎನ್.ಎಸ್.ಒ ಕಂಪೆನಿಯು ಸಂಪೂರ್ಣ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸುತ್ತಿದೆಯೆಂದು ಇಸ್ರೇಲ್ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದೆ. ಇತ್ತೀಚೆಗೆ ನಮ್ಮ ವಿರುದ್ಧ ಮಾಧ್ಯಮಗಳು ಹರಿಯಬಿಡುತ್ತಿರುವ ಸುಳ್ಳು ಆರೋಪದ ವಾಸ್ತವಿಕತೆ ಸದ್ಯದಲ್ಲೇ ಬಹಿರಂಗವಾಗುವ ಭರವಸೆಯಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಇತ್ತೀಚೆಗೆ ಜಾಗತಿಕ ಸಹಕಾರಿ ಸಂಸ್ಥೆ ನಡೆಸಿದ ತನಿಖೆಯಲ್ಲಿ ಪೆಗಾಸಸ್ ಸ್ಪೈವೇರ್ ಮೂಲಕ ಭಾರತದಲ್ಲಿ 300 ಕ್ಕೂ ಅಧಿಕ ಮೊಬೈಲ್ ಫೋನ್ ನಂಬರ್ ಅನ್ನು ಗುರಿಯಾಗಿಸಿದೆ ಎಂದು ತಿಳಿಸಿದೆ. ಮಾತ್ರವಲ್ಲದೆ ನರೇಂದ್ರ ಮೋದಿ ಸರ್ಕಾರದ ಸಂಪುಟದ ಸಚಿವರು, ವಿರೋಧ ಪಕ್ಷದ ನಾಯಕರು, ನ್ಯಾಯಾಧೀಶರು, ಪತ್ರಕರ್ತರು, ಹೋರಾಟಗಾರರು, ಉದ್ಯಮಿಗಳು ಸೇರಿದಂತೆ ಹಲವಾರು ಗಣ್ಯರನ್ನು ಕಣ್ಗಾವಲಿನಲ್ಲಿಡಲಾಗಿದೆಯೆಂಬುದು ತನಿಖೆಯಿಂದ ಬಹಿರಂಗವಾಗಿದೆ.

- Advertisement -

ಕೇಂದ್ರ ಸರ್ಕಾರ ಪೆಗಾಸಸ್ ಸ್ಪೈವೇರ್ ಮೂಲಕ ದೇಶದ ನಾಗರಿಕರನ್ನು ಭಯೋತ್ಪಾದಕರಂತೆ ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಸಂಸತ್ತಿನಲ್ಲಿ ಕೋಲಾಹಲವೆಬ್ಬಿಸಿ ಮುಂಗಾರು ಅಧಿವೇಶನಕ್ಕೆ ಅಡ್ಡಿಪಡಿಸುತ್ತಿದೆ. ಕೇಂದ್ರ ಸರ್ಕಾರವು ಪ್ರತಿಪಕ್ಷದ ಆರೋಪವನ್ನು ತಳ್ಳಿಹಾಕಿದೆ.

ಇದೇ ವೇಳೆ ಜಾಗತಿಕ ಸಹಕಾರಿ ತನಿಖಾ ಸಂಸ್ಥೆಯ ಭಾಗವಾಗಿರುವ ಅಮ್ನೇಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯು, ಪೆಗಾಸೆಸ್ ಸ್ಪೈವೇರ್ ಮೂಲಕ ಕದ್ದಾಲಿಕೆ ನಡೆಸಿದ ಡಾಟಗಳನ್ನು ಎನ್.ಎಸ್.ಒ ಕಂಪೆನಿಗೆ ರವಾನಿಸಲಾಗುತ್ತಿತ್ತು ಎಂದು ಆರೋಪಿಸಿದೆ.



Join Whatsapp