ನಿವೃತ್ತಿಗೆ ನಾಲ್ಕು ದಿನಗಳಿರುವಾಗ ದೆಹಲಿ ಪೊಲೀಸ್ ಆಯುಕ್ತರಾಗಿ ರಾಕೇಶ್ ಆಸ್ತಾನ : ನೇಮಕದ ವಿರುದ್ಧ ನಿರ್ಣಯ ಅಂಗೀಕರಿಸಿದ ದೆಹಲಿ ವಿಧಾನಸಭೆ

Prasthutha|

ನವದೆಹಲಿ ಜುಲೈ 29 : ದೆಹಲಿ ಪೊಲೀಸ್ ಆಯುಕ್ತರಾಗಿ ರಾಕೇಶ್ ಅಸ್ತಾನ ಅವರ ನೇಮಕವನ್ನು ವಿರೋಧಿಸಿ ಜುಲೈ 29 ರಂದು ದೆಹಲಿ ಅಸೆಂಬ್ಲಿ ನಿರ್ಣಯವೊಂದನ್ನು ಅಂಗೀಕರಿಸಿದೆ. ಮಾತ್ರವಲ್ಲದೆ ಅವರ ನೇಮಕವನ್ನು ಹಿಂಪಡೆಯುವಂತೆ ಗೃಹ ಸಚಿವಾಲಯವನ್ನು ಕೋರಿದೆ. ಈ ನಿರ್ಣಯವನ್ನು ಆಮ್ ಆದ್ಮಿ ಪಕ್ಷದ ಶಾಸಕರಾದ ಸಂಜೀವ್ ಜಾಹ್ ಅವರು ಮಂಡಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

- Advertisement -

ಗುಜರಾತ್ ಮೂಲದ ಐ.ಪಿ.ಎಸ್ ಅಧಿಕಾರಿಯಾಗಿರುವ ಅಸ್ತಾನ ಅವರನ್ನು ಜುಲೈ 27 ರಂದು ದೆಹಲಿಯ ನೂತನ ಪೊಲೀಸ್ ಆಯುಕ್ತರಾಗಿ ನೇಮಿಸಲಾಗಿತ್ತು. ಅವರು ಜುಲೈ 31 ರಂದು ನಿವೃತ್ತ ಹೊಂದಲಿದ್ದಾರೆ. 59 ವರ್ಷದ ಪ್ರಾಯದ ಅಸ್ತಾನ ಅವರು ಪ್ರಸ್ತುತ ಗಡಿ ಭದ್ರತಾ ಪಡೆ (ಬಿ.ಎಸ್.ಎಫ್) ನ ಮುಖ್ಯಸ್ಥರಾಗಿದ್ದಾರೆ. ಈ ಹಿಂದೆ ಅವರು ಕೇಂದ್ರ ತನಿಖಾ ದಳದಲ್ಲಿ (ಸಿಬಿಐ) ವಿಶೇಷ ನಿರ್ಧೇಶಕರಾಗಿದ್ದರು. ನಿವೃತ್ತಿಗೆ ಇನ್ನು ಕೇವಲ 4 ದಿನಗಳು ಬಾಕಿಯಿರುವಾಗ ದೆಹಲಿಯ ನೂತನ ಪೊಲೀಸ್ ಆಯುಕ್ತರಾಗಿ ಅವರ ಆಯ್ಕೆ ಕಾನೂನುಬಾಹಿರ ಎಂದು ಆಮ್ ಆದ್ಮಿ ತನ್ನ ಟ್ವೀಟ್ ನಲ್ಲಿ ತಿಳಿಸಿದೆ.



Join Whatsapp