ಮಂಗಳೂರು: ಪಾರ್ಟಿ ಮಾಡೋಣವೆಂದು ಕರೆಸಿ ನಗ್ನ ಫೋಟೋ ತೆಗೆದು ಬ್ಲ್ಯಾಕ್‌ಮೇಲ್| ಯುವತಿ ಸೇರಿ ಇಬ್ಬರ ಬಂಧನ

Prasthutha|

ಮಂಗಳೂರು: ಉಳ್ಳಾಲ ಠಾಣಾ ವ್ಯಾಪ್ತಿಯ ಇನ್ ಲ್ಯಾಂಡ್ ಇಂಪಲ‌ ಅಪಾರ್ಟ್ಮೆಂಟ್ ನಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ದುಬೈ ನಲ್ಲಿ ಉದ್ಯೋಗದಲ್ಲಿದ್ದ ನೆರೆ ಮನೆಯ ವ್ಯಕ್ತಿಯನ್ನು ಊಟೋಪಚಾರಕ್ಕೆಂದು ಮನೆಗೆ ಕರೆಸಿ ಆತನ ನಗ್ನ ಫೋಟೋ ತೆಗೆದು ಎರಡು ಲಕ್ಷ ಹದಿನೈದು ಸಾವಿರ ರೂಪಾಯಿ ಬಂಗಾರ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಮೂಲದ 22 ವರ್ಷದ ಯುವತಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಜು.16ರಂದು ಹನಿಟ್ರ್ಯಾಪ್ ನಡೆದಿದ್ದು, 23ಕ್ಕೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿಗಳಿಂದ ಇತರರಿಗೆ ವಂಚನೆ ಆಗಿದ್ರೆ ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಲು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.

Join Whatsapp