ಉತ್ತರ ಪ್ರದೇಶದಲ್ಲಿ ಪ್ರತಿಭಟನಾ ನಿರತರ ಮೇಲೆ ಪೊಲೀಸ್ ದೌರ್ಜನ್ಯ: ಪ್ರಕರಣ ಮುಕ್ತಾಯಗೊಳಿಸಿದ ಮಾನವ ಹಕ್ಕು ಆಯೋಗ

Prasthutha|

ಲಕ್ನೋ, ಜು.28: ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದವರ ಮೇಲೆ ಅತಿಯಾದ ಪೊಲೀಸ್ ಬಲಪ್ರಯೋಗ ಮಾಡಿ ಹಲವರು ಗಾಯಗೊಳ್ಳುವಂತೆ ಮಾಡಿದ ಮೊಕದ್ದಮೆಗಳನ್ನು ಎನ್‌ ಎಚ್‌ ಆರ್‌ ಸಿ- ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಮುಕ್ತಾಯಗೊಳಿಸಿದೆ. ಈ ಪ್ರಕರಣದಲ್ಲಿ “ಆಯೋಗದ ಹೆಚ್ಚಿನ ಹಸ್ತಕ್ಷೇಪದ ಅಗತ್ಯವಿಲ್ಲ” ಮತ್ತು ಪ್ರಕರಣವನ್ನು ಮುಕ್ತಾಯಗೊಳಿಸಲಾಗಿ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಹೇಳಿದೆ.

- Advertisement -

ಜನವರಿ 2020ರಲ್ಲಿ ಈ ಸಂಬಂಧ ಎನ್‌ ಸಿ ಎಚ್‌ ಆರ್‌ ಓ- ಮಾನವ ಹಕ್ಕುಗಳ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟವು ಪೊಲೀಸ್ ದೌರ್ಜನ್ಯದ ಬಗ್ಗೆ ಒಂದು ಮೊಕದ್ದಮೆ ದಾಖಲಿಸಿತ್ತು. ಲಕ್ನೋ ಪೊಲೀಸ್ ವರಿಷ್ಠಾಧಿಕಾರಿಯವರ ಹಲವು ವರದಿಗಳ ಬಳಿಕ ಮಾನವ ಹಕ್ಕುಗಳ ಆಯೋಗವು ಒಂದು ವರುಷದ ಬಳಿಕ ಆ ಮೊಕದ್ದಮೆಯನ್ನು ಮುಕ್ತಾಯಗೊಳಿಸಿದೆ. ಮುಖ್ಯವಾಗಿ ಪೊಲೀಸರ ವರದಿಯಲ್ಲಿ ಪ್ರತಿಭಟನಕಾರರು ಅದಕ್ಕೆ ಅಗತ್ಯದ ಅನುಮತಿಯನ್ನು ಪಡೆದಿರಲಿಲ್ಲ ಎಂದು ತಿಳಿಸಲಾಗಿತ್ತು. ರಾಷ್ಟ್ರೀಯ ಮಾನವ ಹಕ್ಕುಗಳ ಅಯೋಗವು ಹಿಂದಕ್ಕೆ ಸರಿಯುವುದೆಂದರೆ ಅದು ಮಾನವ ಹಕ್ಕುಗಳ ರಕ್ಷಣೆಗಿಂತ ಹೆಚ್ಚಾಗಿ ಮಾನವ ಹಕ್ಕು ದಮನ ಮಾಡುವವರ ಜೊತೆ ನಿಂತಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಮಾನವ ಹಕ್ಕುಗಳ ಆಯೋಗವು ಪ್ರತಿಭಟನಕಾರರು ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡಿದ್ದಾರೆ. ಅದರ ನಷ್ಟ ಜಪ್ತಿ ಮಾಡಬೇಕು ಎಂದೂ ಹೇಳಿದೆ. ಎನ್‌ ಸಿಎಚ್‌ ಆರ್‌ ಒ ದೆಹಲಿ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಜೀಮ್ ಖಾನ್ ಅವರು ದೂರು ದಾಖಲಿಸಿದ್ದರು.

ರಾಜ್ಯದ ಮಾನವ ಹಕ್ಕುಗಳ ಆಯೋಗಗಳ ಸತ್ವವನ್ನು ಹೀರುವ ಕೆಲಸವನ್ನು ಮಾನವ ಹಕ್ಕುಗಳ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟವು ಮಾಡಿದೆ. ಕೂಡಲೆ ಎನ್‌ ಸಿ ಎಚ್‌ ಆರ್‌ ಒ ರಾಜ್ಯದ ಮಾನವ ಹಕ್ಕುಗಳ ಆಯೋಗಕ್ಕೆ ಸದರಿ ಮೊಕದ್ದಮೆಯನ್ನು ಮತ್ತೊಮ್ಮೆ ಆರಂಭಿಸುವಂತೆ ಹೇಳಬೇಕು. ಆಗ ಮಾತ್ರ ಮಾನವ ಹಕ್ಕುಗಳ ಆಯೋಗವು ಜನರಲ್ಲಿ ನಂಬಿಕೆ ಉಳಿಸಿಕೊಳ್ಳುವುದು ಸಾಧ್ಯ ಎಂದು ಹಲವು ಸಂಘಟನೆಗಳು ಒತ್ತಾಯಿಸಿವೆ.



Join Whatsapp