ಪೊಲೀಸರು ಆರೋಪಿಗಳಿಗೆ ಶೂಟ್ ಮಾಡಿದ್ರೆ ಇನ್ಮುಂದೆ ಎಕ್ಸ್ ರೇ ರಿಪೋರ್ಟ್ ಕೊಡಬೇಕು: ಆಯುಕ್ತ ಕಮಲ್‌ ಪಂತ್

Prasthutha|

ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ‌ ನಡೆಸಿ ಪರಾರಿಯಾಗುವ ಆರೋಪಿಗಳಿಗೆ ಪೊಲೀಸರು ಗುಂಡು ಹೊಡೆದರೆ ಕಾಲಿನ ಎಕ್ಸ್ ರೇ ಪ್ರತಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಪೊಲೀಸ್ ಆಯುಕ್ತ ಕಮಲ್‌ ಪಂತ್ ಹೇಳಿದ್ದಾರೆ.

- Advertisement -

ವಿವಿಧ ಅಪರಾಧ ಕೃತ್ಯಗಳನ್ನು ಎಸಗಿ, ಸುಗಮ ಕಾನೂನು‌ ಸುವ್ಯವಸ್ಥೆ ಧಕ್ಕೆಗೆ ಕಾರಣರಾಗಿ ಬಂಧಿಸಲು ಹೋದವರ ಮೇಲೆ ಹಲ್ಲೆ ನಡೆಸುವ ಆರೋಪಿಗಳಿಗೆ ಶೂಟೌಟ್ ಅಸ್ತ್ರವನ್ನು ಬಳಸುವ ಪೊಲೀಸರು, ಆರೋಪಿಗಳ ಕಾಲಿಗೆ ಗುಂಡು ಹಾರಿಸುವಾಗಲು ಹಣದ ವ್ಯವಹಾರ ಮಾಡಿ ಚರ್ಮಕ್ಕೆ ತಗುಲಿದರೆ ಒಂದು ದರ, ಬುಲೆಟ್ ಸವರಿ ಹೋದರೆ ಮತ್ತೊಂದು ದರ, ನಿಗದಿಪಡಿಸಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪವಿದೆ.

ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಶೂಟೌಟ್ ಮಾಡಿದ ಬಳಿಕ ಎಕ್ಸ್ ರೇ ಪ್ರತಿಯನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಬೇಕು ಹಾಗೂ ಗುಂಡು ಬಿದ್ದ ಸ್ಥಳದ ಅನ್ವಯ ಗುಂಡು ನುಗ್ಗಿಸಿದವನು ಸಮಜಾಯಿಷಿ ನೀಡಬೇಕು ಎಂದು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ‌.



Join Whatsapp