ಆಗಸ್ಟ್ 10ರಿಂದ ಮಕ್ಕಾದಲ್ಲಿ ಉಮ್ರಾ ನೆರವೇರಿಸಲು ಅವಕಾಶ

Prasthutha|

ರಿಯಾದ್, ಜು.26: ಹಜ್ಜ್ ಯಶಸ್ವಿಯ ನಂತರ ಇದೀಗ ಸೌದಿ ಅರೇಬಿಯಾ, ಉಮ್ರಾ ಸೇವೆ ಸಲ್ಲಿಸಲು ಜಗತ್ತಿನ ಯಾತ್ರಾರ್ಥಿಗಳಿಗೆ ಅವಕಾಶ ಕಲ್ಪಿಸಿದೆ. ಆಗಸ್ಟ್ 10ರಿಂದ (ಹಿಜರಿ 1443, ಮುಹರ್ರಮ್ 1) ಜಗತ್ತಿನ ಮುಸ್ಲಿಮ್ ಯಾತ್ರಾರ್ಥಿಗಳು ಉಮ್ರಾ ನಿರ್ವಹಿಸಬಹುದು ಎಂದು ಸರ್ಕಾರ ಸೋಮವಾರ ತಿಳಿಸಿದೆ.

- Advertisement -


ಕೋವಿಡ್- 19 ಮಾರ್ಗಸೂಚಿಗಳನ್ನು ಪಾಲಿಸಿ ನಿರ್ದಿಷ್ಟ ಪ್ರಾರ್ಥನಾ ಸ್ಥಳಗಳನ್ನು ಯಾತ್ರಿಕರಿಗಾಗಿ ಗೊತ್ತುಪಡಿಸಲಾಗಿದೆ
ಸೌದಿ ನಾಗರಿಕರು ಮತ್ತು ಕಿಂಗ್ ಡಮ್ ನಿವಾಸಿಗಳಿಗೆ ಜುಲೈ 25 ರಿಂದ ಉಮ್ರಾ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಜುಲೈ 17 ರಿಂದ ಹಜ್ ತಯಾರಿ ಹಿನ್ನೆಲೆಯಲ್ಲಿ ಉಮ್ರಾವನ್ನು ಧುಲ್ ಹಿಜ್ಜಾದ ಮೊದಲ ವಾರದಲ್ಲಿ ಅಮಾನತುಗೊಳಿಸಲಾಗಿತ್ತು.


ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ತವಾಫ್ ಮಾಡುವಾಗ ಯಾತ್ರಿಕರು ನೆಲದ ಮೇಲೆ ಹಾಕಿರುವ ಗುರುತುಗಳ ಮೇಲೆಯೇ ಹೆಜ್ಜೆ ಇಡುವಂತೆ ಯಾತ್ರಾರ್ಥಿಗಳಿಗೆ ಸೂಚಿಸಲಾಗಿದೆ.



Join Whatsapp