ಸ್ಟಾನ್ ಸ್ವಾಮಿ ಸಾವು ನ್ಯಾಯಾಂಗ ತನಿಖೆಗೊಳಪಡಿಸಿ: ಐಎಸ್ಐ ಸಂಸ್ಥೆ ಒತ್ತಾಯ | ಮೊಂಬತ್ತಿ ಉರಿಸಿ ಶ್ರದ್ಧಾಂಜಲಿ ಅರ್ಪಣೆ

Prasthutha|

- Advertisement -

ಬೆಂಗಳೂರು: ಫಾದರ್ ಸ್ಟಾನ್ ಸಾವನ್ನು ಖಂಡಿಸಿ ಮತ್ತು ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಬೆಂಗಳೂರಿನ ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಟ್ ಮೊಂಬತ್ತಿ ಉರಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ಫಾದರ್ ಸ್ಟಾನ್ ಸ್ವಾಮಿ ದಲಿತರ, ಆದಿವಾಸಿಗಳ ಹಕ್ಕುಗಳಿಗಾಗಿ, ದೇಶದ ಸಾರ್ವಭೌಮತೆಗಾಗಿ, ಸಮಾನತೆಗಾಗಿ ಮತ್ತು ಮಾನವ ಹಕ್ಕುಗಳಿಗಾಗಿ ಹಗಲಿರುಳು ಕಷ್ಟಪಟ್ಟವರಾಗುದ್ದಾರೆ. ಸರಕಾರ ಯುಎಪಿಎ ಎಂಬ ಕರಾಳ ಕಾಯ್ದೆಯನ್ನು ಸ್ಟಾನ್ ಸ್ವಾಮಿ ಮೇಲೆ ಹಾಕುವ ಮೂಲಕ ಪೊಲೀಸ್ ಕಸ್ಟಡಿಯಲ್ಲೇ ಸಾವನ್ನಪ್ಪುವಂತೆ ಮಾಡಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಸ್ಟಾನ್ ಸಾವು ಸರಕಾರ ಮಾಡಿರುವ ಕೊಲೆಯಾಗಿದೆ. ಸ್ಟಾನ್ ಸಾವನ್ನು ನ್ಯಾಯಾಂಗ ತನಿಖೆ ನಡೆಯಬೇಕೆಂದು ಸರಕಾರವನ್ನು ಒತ್ತಾಯಿಸಿದರು.

- Advertisement -

1975 ರಿಂದ 1986 ರವರೆಗೆ ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಟ್ ಇದರ ಡೈರಕ್ಟೆರ್ ಆಗಿ ಸಮಾಜಕ್ಕಾಗಿ ನಮ್ಮ ಸಂಸ್ಥೆಯ ಮೂಲಕ ಸೇವೆ ಸಲ್ಲಿಸಿದರು ಎಂದು ಐಏಸ್ ಐ ಸಂಸ್ಥೆ ಈ ಸಂದರ್ಭ ಸ್ಮರಿಸಿಕೊಂಡಿದೆ.

ಭೀಮಾ ಕೋರೆಂಗಾವ್ ಘಟನೆಗೆ ಸಂಬಂಧಪಟ್ಟಂತೆ ಬಂಧಿತರಾಗಿರುವ ವಿಚಾರಣಾಧೀನ ಖೈದಿಗಳನ್ನು ತಕ್ಷಣ ಬಿಡುಗಡೆಗೊಳಿಸವಂತೆಯೂ ಒತ್ತಾಯಿಸಿದರು.

ಶ್ರದ್ಧಾಂಜಯಲ್ಲಿ ಬೆಂಗಳೂರು ಮಹಾಧರ್ಮಾಧ್ಯಕ್ಷರಾದ ಡಾ.ಪೀಟರ್ ಮಚಾದೊ, ಐಎಸ್ಐ ನಿರ್ದೇಶಕರಾದ ಫಾದರ್ ಜೋಸೆಫ್ ಕ್ಸೇವಿಯರ್, ಉಪಾಧ್ಯಕ್ಷರಾದ ಫಾದರ್ ಜೋಯ್ ಜೇಮ್ಸ್ ಮತ್ತಿತರು ಉಪಸ್ಥಿತರಿದ್ದರು.



Join Whatsapp