ಬಿಜೆಪಿ ಐಟಿ ಸೆಲ್ ಮುಖ್ಯಸ್ಥನಿಂದ ಹಥ್ರಾಸ್ ಅತ್ಯಾಚಾರ ಆರೋಪಿಗಳ ಸಮರ್ಥನೆ

Prasthutha|

ಲಕ್ನೋ : ಉತ್ತರ ಪ್ರದೇಶದ ಹಥ್ರಾಸ್ ನಲ್ಲಿ ದಲಿತ ಬಾಲಕಿಯ ಮೇಲೆ ನಡೆದ ಕ್ರೂರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ತಮಿಳುನಾಡು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಸಮರ್ಥಿಸಿಕೊಂಡಿದ್ದಾರೆ.

- Advertisement -

ಬಾಲಕಿಯ ಮೃತದೇಹವನ್ನು ಕುಟುಂಬದವರ ಅನುಮತಿಯಿಲ್ಲದೆ ಬಲವಂತವಾಗಿ ಅಂತ್ಯ ಸಂಸ್ಕಾರ ನಡೆಸಿದ ಪೊಲೀಸರ ಕ್ರಮದ ವಿರುದ್ಧ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಮಧ್ಯೆ ತಮಿಳುನಾಡು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ನಿರ್ಮಲ್ ಕುಮಾರ್ ಕೊಲೆಯಾದ ಬಾಲಕಿಯನ್ನು ನಿಂದಿಸಿದ್ದು, ಅತ್ಯಾಚಾರ ಮತ್ತು ಹಿಂಸೆಯಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಹುಡುಗಿಯ ಮುಖವನ್ನು ಮರೆಮಾಚದೆ, ಗಾಯಗೊಂಡ ಹುಡುಗಿ ಸ್ಟ್ರೆಚರ್ ಮೇಲೆ ಮಲಗಿರುವ ವೀಡಿಯೋವನ್ನು ಹಂಚಿಕೊಳ್ಳುವ ಮೂಲಕ ಅವರು ವಿವಾದಕ್ಕೊಳಗಾಗಿದ್ದಾರೆ.

- Advertisement -

“ನೋಡಿ ಹುಡುಗಿಯ ನಾಲಗೆ ಕತ್ತರಿಸಲಾಗಿಲ್ಲ, ಬಾಲಕಿ ಅತ್ಯಾಚಾರದ ಬಗ್ಗೆ ಏನನ್ನೂ ಹೇಳಲಿಲ್ಲ” ಎಂದು ವೀಡಿಯೋ ಹಂಚಿಕೊಳ್ಳುತ್ತಾ ನಿರ್ಮಲ್ ಕುಮಾರ್ ಹೇಳಿದ್ದಾರೆ. ಅಮಾಯಕರನ್ನು ಬಳಸಿಕೊಂಡು ‘ಇಟಾಲಿಯನ್’ ಮಾಫಿಯಾ ಚೀಪ್ ರಾಜಕೀಯ ಆಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಏತನ್ಮಧ್ಯೆ, ಬಾಲಕಿಯನ್ನು ನಿಂದಿಸಲು ನಿರ್ಮಲ್ ಕುಮಾರ್ ಹಂಚಿಕೊಂಡ ವೀಡಿಯೋ ನಕಲಿ ಎಂಬುದು ಸ್ಪಷ್ಟವಾಗಿದೆ. ಹಥ್ರಾಸ್ ಹುಡುಗಿಯ ಹೆಸರಿನಲ್ಲಿ ಈತ ಹಂಚಿಕೊಂಡಿದ್ದ ವೀಡಿಯೋ ಚಂಡೀಗಢದ ಆಸ್ಪತ್ರೆಯಲ್ಲಿ ವೈದ್ಯಕೀಯ ದೋಷದಿಂದ ಸಾವನ್ನಪ್ಪಿದ ಹುಡುಗಿಯ ದೃಷ್ಯ ಎಂಬುದು ಸ್ಪಷ್ಟವಾಗಿದೆ.



Join Whatsapp