ಬಕ್ರೀದ್ ಆಚರಣೆಗೆ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ; ಸಾಮೂಹಿಕ ಪ್ರಾರ್ಥನೆಗೆ ಬ್ರೇಕ್!

Prasthutha|

ಬೆಂಗಳೂರು: ಜು.21ರಂದು ಆಚರಿಸಲಾಗುವ ಬಕ್ರೀದ್ ಆಚರಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ಹೇರಲಾಗಿದೆ. ಮಸೀದಿಗಳಲ್ಲಿ 50 ಜನರೊಂದಿಗೆ ಕೋವಿಡ್ ನಿಯಂತ್ರಣ ಕ್ರಮಗಳೊಂದಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ.

- Advertisement -

ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮುಖ್ತಾರ್ ಪಾಷ ಬಿಡುಗಡೆಗೊಳಿಸಿದ ಮಾರ್ಗಸೂಚಿಗಳ ಪ್ರಕಾರ, ಈದ್ಗಾಗಳಲ್ಲಿ ಬಕ್ರೀದ್ ದಿನ ಸಾಮೂಹಿಕ ಪ್ರಾರ್ಥನೆಯನ್ನು ನಿರ್ಬಂಧಿಸಿದ್ದು, ಸಾಮೂಹಿಕ ಪ್ರಾರ್ಥನೆಯನ್ನು ನಿರ್ವಹಿಸಲು ಇಚ್ಛಿಸಿದ್ದಲ್ಲಿ ಈಗಾಗಲೇ ದಿನಾಂಕ 01-03-2021ರಂದು ಹೊರಡಿಸಲಾಗಿರುವ ಎಸ್‌ಓಪಿ ಮಾರ್ಗಸೂಚಿಗಳ ಷರತ್ತಿಗೊಳಪಟ್ಟು ಮಸೀದಿಗಳಲ್ಲಿ ಮಾತ್ರ 50 ಭಕ್ತಾದಿಗಳೊಂದಿಗೆ ಪ್ರಾರ್ಥನೆ ನಿರ್ವಹಿಸಲು ಅವಕಾಶವಿರುತ್ತದೆ.

ಒಂದು ವೇಳೆ ಅಧಿಕ ಮಂದಿ ಮಸೀದಿಗೆ ಆಗಮಿಸಿದರೆ ಹಂತ ಹಂತವಾಗಿ ನಮಾಝ್ ನಿರ್ವಹಿಸಲು ಅವಕಾಶ ಕಲ್ಪಿಸಬಹುದಾಗಿದೆ.

- Advertisement -

ಮಸೀದಿಗಳಲ್ಲಿ ಮಾಸ್ಕನ್ನು ಕಡ್ಡಾಯವಾಗಿ ಧರಿಸಬೇಕು, 65 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷ ಕಡಿಮೆ ವಯಸ್ಸಿನ ಮಕ್ಕಳು ಮಸೀದಿಗೆ ತೆರಳಬಾರದು. 

ಈ ಎಲ್ಲಾ ಹಿನ್ನೆಲೆಯಲ್ಲಿ ಜು.21, 2021ರಂದು ಬಕ್ರೀದ್ ಹಬ್ಬದ ದಿನ ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿರ್ಬಂಧಿಸಿದ್ದು, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿರ್ವಹಿಸಲು ಇಚ್ಚಿಸಿದ್ಧಲ್ಲಿ ಸರ್ಕಾರದ ಆದೇಶದನ್ವಯ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಆಯಾ ಮಸೀದಿಗಳಲ್ಲಿ 50 ಜನರು ಮೀರದಂತೆ ಈ ಕೆಳಕಂಡ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ, ಸಾಮೂಹಿಕ ಪ್ರಾರ್ಥನೆ ನಿರ್ವಹಿಸಬಹುದು ಎಂಬುದಾಗಿ ತಿಳಿಸಲಾಗಿದೆ.



Join Whatsapp