ಚರ್ಚ್ ಸ್ಮಶಾನದಲ್ಲಿ ಹಿಂದೂ ದಂಪತಿಯ ಅಂತ್ಯ ಸಂಸ್ಕಾರ

Prasthutha|

ತಿರುವನಂತಪುರ : ಹಿಂದೂ ದಂಪತಿಯ ಅಂತ್ಯ ಸಂಸ್ಕಾರ ನೆರವೇರಿಸಲು ಕೇರಳದ ಅಲಪ್ಪುಳ ಜಿಲ್ಲೆಯ ಎಡತ್ವಾ ಗ್ರಾಮದಲ್ಲಿನ ಸೆಂಟ್‌ ಜಾರ್ಜ್‌ ಫೋರೆನ್ಸ್‌ ಚರ್ಚ್ ಗೆ ಸೇರಿದ ಸ್ಮಶಾನದಲ್ಲಿ ಅವಕಾಶ ಮಾಡಿಕೊಡುವ ಮೂಲಕ ಭಾವೈಕ್ಯದ ಸಂದೇಶ ಸಾರಲಾಗಿದೆ.

- Advertisement -

ಎಡತ್ವಾ ಸಮೀಪದ ಮರಿಯಾಪುರಂ ಗ್ರಾಮದ ನಿವಾಸಿಗಳಾದ ಶ್ರೀನಿವಾಸನ್‌ ಹಾಗೂ ಕೃಷ್ಣವೇಣಿ ಅವರ ಅಂತ್ಯಕ್ರಿಯೆಯನ್ನು ಹಿಂದೂ ಧರ್ಮದ ವಿಧಿವಿಧಾನಗಳಂತೆಯೇ ನೆರವೇರಿಸಲು ಚರ್ಚ್ ಅನುವು ಮಾಡಿಕೊಟ್ಟಿದೆ.
80 ವರ್ಷದ ಶ್ರೀನಿವಾಸನ್‌ ಅವರು ಕೋವಿಡ್‌ನಿಂದಾಗಿ ಕಳೆದ ತಿಂಗಳು ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಸೇಂಟ್‌ ಜಾರ್ಜ್‌ ಫೋರೆನ್ಸ್‌ ಚರ್ಚ್‌ಗೆ ಸೇರಿದ ಸ್ಮಶಾನದಲ್ಲಿ ನೆರವೇರಿಸಲಾಯಿತು.
ಪತ್ನಿ ಕೃಷ್ಣವೇಣಿ ಅವರು ವಯೋಸಹಜ ಕಾಯಿಲೆಗಳಿಂದಾಗಿ ಮಂಗಳವಾರ ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆಯನ್ನೂ ಇದೇ ಸ್ಮಶಾನದಲ್ಲಿ ನೆರವೇರಿಸಲಾಯಿತು.

ಈ ದಂಪತಿಗೆ ಸ್ವಂತ ಜಮೀನು ಇರಲಿಲ್ಲ. ಅವರು ವಾಸವಿದ್ದ ಬಾಡಿಗೆ ಜಾಗ, ಪತಿ ಶ್ರೀನಿವಾಸನ್‌ ಮೃತಪಟ್ಟಾಗ ಜಲಾವೃತಗೊಂಡಿತ್ತು. ಈಗ ಪತ್ನಿ ಮೃತಪಟ್ಟಾಗಲೂ ಅದೇ ಪರಿಸ್ಥಿತಿ ಇದ್ದ ಕಾರಣ ಅಂತ್ಯಕ್ರಿಯೆಗಾಗಿ ಚರ್ಚ್‌ ಆಡಳಿತವನ್ನು ಕೇಳಿಕೊಂಡೆವು. ಅವರು ಒಪ್ಪಿಗೆ ನೀಡಿದರು’ ಎಂದು ಎಡತ್ವಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಮರಿಯಮ್ಮ ಜಾರ್ಜ್‌ ತಿಳಿಸಿದರು.

- Advertisement -

ಇತ್ತೀಚ್ಚೆಗೆ ಸುಳ್ಯದಲ್ಲಿ ಅನ್ಯಧರ್ಮೀಯ ದೇವಸ್ಥಾನದ ಜಾಗದಲ್ಲಿ ಕ್ರಿಸ್ಚಿಯನ್ ಯುವಕ ತನ್ನ ಗೆಳೆಯರೊಂದಿಗೆ ಆಟವಾಡುತ್ತಿದ್ದನ್ನು ಸ್ಥಳೀಯ ಸಂಘಪರಿವಾರದವರು ತಡೆದು ವಿರೋಧಿಸಿದ ವೀಡಿಯೋ ವೈರಲ್ ಆಗಿರುವುದು ನೆನಪಿಸಬಹುದು.



Join Whatsapp