ಮಥುರಾದಲ್ಲಿರುವ ಶಾಹಿ ಈದ್ಗಾ ಮಸ್ಜಿದ್ ಶ್ರೀಕೃಷ್ಣ ಜನ್ಮಸ್ಥಾನ. ಆದುದರಿಂದ ಅದನ್ನು ಅಲ್ಲಿಂದ ತೆರವುಗೊಳಿಸಬೇಕು ಎಂದು ಹಾಕಿದ್ದ ಅರ್ಜಿಯನ್ನು ಮಥುರಾ ಜಿಲ್ಲಾ ಸಿವಿಲ್ ನ್ಯಾಯಾಲಯ ಇಂದು ತಳ್ಳಿ ಹಾಕಿದೆ.
ಮೊಘಲ್ ರಾಜ ಔರಂಗಝೇಬ್ 1669-70 ರಲ್ಲಿ ಖಾತ್ರಾ ಕೇಶವ್ ದೇವಿ ಮಂದಿರವನ್ನು ನಾಶಪಡಿಸಿ ಶಾಹಿ ಈದ್ಗಾ ಮಸ್ಜಿದನ್ನು ನಿರ್ಮಿಸಲಾಗಿದೆ ಎಂದು ಶ್ರೀಎ ಕೃಷ್ಣ ವಿರಾಜ್ ಮನ್ಹಾದ್ ಎಂಬ ಸಮಿತಿ ಇತ್ತೀಚೆಗೆ ಅರ್ಜಿ ಸಲ್ಲಿಸಿತ್ತು. ಅದು ಮಾತ್ರವಲ್ಲ 1968ರಲ್ಲಿ ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಘ ಹಾಗೂ ಶಾಹಿ ಈದ್ಗಾ ಟ್ರಸ್ಟ್ ನಡುವೆ ನಡೆದಿದ್ದ ಸೌಹಾರ್ದ ಒಪ್ಪಂದವನ್ನೂ ರದ್ದು ಪಡಿಸಬೇಕೆಂದು ಅರ್ಜಿಯಲ್ಲಿ ಆಗ್ರಹಿಸಲಾಗಿತ್ತು.