ಡೆಹ್ರಾಡೂನ್: ಕೋವಿಡ್ ಮೂರನೆಯ ಅಲೆಯ ಭೀತಿಯ ನಡುವೆ ಈ ವರ್ಷ ಕನ್ವರ್ ಯಾತ್ರೆ ರದ್ದುಗೊಳಿಸಲು ಉತ್ತರಾಖಂಡ ಸರ್ಕಾರ ನಿರ್ಧರಿಸಿದೆ.
ಆದರೆ ಕೋವಿಡ್ ಆತಂಕದ ನಡುವೆಯೂ ಜುಲೈ 25 ರಿಂದ ಉತ್ತರ ಪ್ರದೇಶ ಸರ್ಕಾರವು ಯಾತ್ರೆಗೆ ಅನುಮತಿ ನೀಡಿದೆ. ಕೋವಿಡ್ ಮೂರನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಸುರಕ್ಷತೆಗಾಗಿ ಈ ವರ್ಷ ಕನ್ವರ್ ಯಾತ್ರೆಯನ್ನು ರದ್ದುಗೊಳಿಸುವಂತೆ ಕೋರಿ ಭಾರತೀಯ ವೈದ್ಯಕೀಯ ಸಂಘವು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಗೆ ಸೋಮವಾರ ಪತ್ರ ಬರೆದಿತ್ತು.
ಈ ಹಿಂದೆ, ವಾರ್ಷಿಕ ತೀರ್ಥಯಾತ್ರೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಕನ್ವರ್ ಯಾತ್ರೆಗೂ ಅನುಮತಿ ನೀಡಿದ್ದಾರೆ. ಜುಲೈ 25 ರ ಸುಮಾರಿಗೆ ಶ್ರಾವಣ ಮಾಸದಿಂದ ಪ್ರಾರಂಭವಾಗಿ ಆಗಸ್ಟ್ ಮೊದಲ ವಾರದವರೆಗೆ ನಡೆಯುವ ಹದಿನೈದು ದಿನಗಳ ಈ ಯಾತ್ರೆಯಲ್ಲಿ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ದೆಹಲಿ ಮತ್ತು ಹಿಮಾಚಲ ಪ್ರದೇಶದಿಂದ ಆಗಮಿಸುವ ಭಕ್ತರು ಹರಿದ್ವಾರದಲ್ಲಿ ಒಟ್ಟುಗೂಡುತ್ತಾರೆ.