ವಾಟ್ಸ್ ಆ್ಯಪ್ ಗೌಪ್ಯತೆ ನೀತಿ ಸದ್ಯಕ್ಕೆ ಸ್ಥಗಿತ | ಬಳಕೆದಾರರು ನಿರಾಳ

Prasthutha|

ನವದೆಹಲಿ: ಡೇಟಾ ಭದ್ರತಾ ಕಾಯಿದೆ ಜಾರಿಗೆ ಬರುವ ತನಕ ತಾತ್ಕಾಲಿಕವಾಗಿ ಗೌಪ್ಯತಾ ನೀತಿಯನ್ನು ತಡೆಹಿಡಿಯಲು ನಿರ್ಧರಿಸಿದೆ ಎಂದು ವಾಟ್ಸಪ್ ಶುಕ್ರವಾರ ತನ್ನ ಗೌಪ್ಯತಾ ನೀತಿಯ ಬಗ್ಗೆ ದೆಹಲಿ ಹೈಕೋರ್ಟ್ಗೆ ತಿಳಿಸಿದೆ.ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಮುಖ್ಯ ನ್ಯಾಯಮೂರ್ತಿ ಡಿ. ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ನ್ಯಾಯಪೀಠ ಫೇಸ್ಬುಕ್ ಮತ್ತು ವಾಟ್ಸಾಪ್ ಮೇಲ್ಮನವಿ ವಿಚಾರಣೆ ನಡೆಸಿತು. ಏಕ ನ್ಯಾಯಾಧೀಶರ ಪೀಠವು, ವಾಟ್ಸಾಪ್ ನ ಹೊಸ ನೀತಿಯ ಬಗ್ಗೆ ತನಿಖೆ ನಡೆಸಲು ನಿರ್ದೇಶಿಸುವ ಭಾರತದ ‘ಸ್ಪರ್ಧಾ ನಿಯಂತ್ರಕ ಆಯೋಗ’ (ಸಿಸಿಐ)ದ ಆದೇಶವನ್ನು ತಡೆಹಿಡಿಯಲು ನಿರಾಕರಿಸಿತ್ತು.

- Advertisement -

“ಹೊಸ ಗೌಪ್ಯತಾ ನೀತಿಯನ್ನು ಸ್ಥಗಿತಗೊಳಿಸಲು ಸರ್ಕಾರ ಕೇಳಿ ಕೊಂಡಿದೆ. ಡೇಟಾ ಭದ್ರತಾ ಕಾಯಿದೆ ಯಾವಾಗ ಜಾರಿಗೆ ಬರುತ್ತದೆ ಎಂದು ಗೊತ್ತಿಲ್ಲದ ಕಾರಣ ಅಲ್ಲಿಯ ತನಕ ನಿರ್ಧಾರ ಮುಂದುವರಿಯಲಿದೆ. ಒಂದು ವೇಳೆ ಹೊಸ ನಿಯಮಕ್ಕೆ ಕಾನೂನಿನ ಅನುವು ದೊರೆತರೆ ನಾವು ವಿಭಿನ್ನ ಮಾರ್ಗದಲ್ಲಿ ಸಾಗಲಿದ್ದೇವೆ ಎಂದು ವಾಟ್ಸಾಪ್ ಪರವಾಗಿ ಹಾಜರಾದ ವಕೀಲ ಹರೀಶ್ ಸಾಲ್ವೆ ವಿವರಿಸಿದರು.

ಪ್ರೈವೆಸಿ ಪಾಲಿಸಿಯು, ಮಾಹಿತಿ ತಂತ್ರಜ್ಞಾನ ಕಾಯಿದೆ 2021 ಕ್ಕೆ ವಿರೋಧವಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ವಾಟ್ಸ್ ಆ್ಯಪ್ ಗೆ ಸೂಚಿಸಿತ್ತು. ಹೊಸ ಪಾಲಿಸಿಯನ್ನು ಜಾರಿಗೆ ತರುವ ಕುರಿತು ಪ್ರತಿಕ್ರಿಯೆ ನೀಡುವಂತೆ ವಾಟ್ಸ್ ಆ್ಯಪ್ ಸಿಇಒ ಮಾರ್ಕ್ ಜುಕರ್ ಬರ್ಗ್ ಅವರಿಗೆ ಪತ್ರ ಬರೆಯಲಾಗಿದೆ, ಅದಕ್ಕಾಗಿ ಕಾಯುತ್ತಿದ್ದು, ಅಲ್ಲಿ ತನಕ ಯಥಾಸ್ಥಿತಿ ಕಾಪಾಡಬೇಕು ಎಂದು ಕೇಂದ್ರ ಸರಕಾರ ಈ ಹಿಂದೆ ದಿಲ್ಲಿ ಹೈಕೋರ್ಟ್ ಗೆ ವರದಿ ನೀಡಿತ್ತು.



Join Whatsapp