ಭೋಪಾಲ್: ಕೋವಿಡ್ ಎರಡನೇ ಅಲೆಯಿಂದ ಮೃತಪಟ್ಟವರ ನೆನಪಿಗಾಗಿ ಉದ್ಯಾನವನವನ್ನು ನಿರ್ಮಿಸಲು ಮಧ್ಯಪ್ರದೆಶದ ಭೋಪಾಲ್ ನ ಸ್ಮಶಾನವೊಂದು ನಿರ್ಧರಿಸಿದೆ. ಭದ್‌ಬದ ವಿಶ್ರಮ್ ಘಾಟ್ ಭೋಪಾಲ್‌ನ ಅತಿದೊಡ್ಡ ಸ್ಮಶಾನಗಳಲ್ಲಿ ಒಂದಾಗಿದೆ. ಇಲ್ಲಿ ಅಂತ್ಯಕ್ರಿಯೆ ನಡೆಸಿದ ಕೋವಿಡ್ ನಿಂದ ಮೃತಪಟ್ಟವರ ಚಿತಾಭಸ್ಮವನ್ನು ಬಳಸಿ ಉದ್ಯಾನವನವನ್ನು ನಿರ್ಮಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಸುಮಾರು 21 ಟ್ರಕ್ ಲೋಡ್ ಚಿತಾಭಸ್ಮವು ವಿಶ್ರಮ್ ಘಾಟ್ ನಲ್ಲಿ ವಿಲೇವಾರಿ ಮಾಡದೆ ಹಾಗೆಯೇ ಉಳಿದಿದೆ. ಈಗಿನ ಪರಿಸ್ಥಿತಿಯಲ್ಲಿ ಅವುಗಳನ್ನು ನದಿಗಳಲ್ಲಿ ಬಿಡುವುದು ಸೂಕ್ತವಲ್ಲ. ಆದ್ದರಿಂದ, ಚಿತಾಭಸ್ಮವನ್ನು ಬಳಸಿ ಮೃತಪಟ್ಟವರ ನೆನಪಿಗಾಗಿ ಉದ್ಯಾನವನವನ್ನು ನಿರ್ಮಿಸಲು ವಿಶ್ರಮ್ ಘಾಟ್ ನಿರ್ವಹಣಾ ಸಮಿತಿ ನಿರ್ಧರಿಸಿದೆ.
ಈ ಉದ್ಯಾನವನವು ಸುಮಾರು 12,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಉದ್ಯಾನವನದಲ್ಲಿ 3500-4000 ಸಸ್ಯಗಳನ್ನು ನೆಡುವ ಗುರಿ ಹೊಂದಿದ್ದು, ಸಸ್ಯಗಳು ವೇಗವಾಗಿ ಬೆಳೆಯಲು ಮಣ್ಣಿನಲ್ಲಿ ಬೂದಿ, ಸಗಣಿ ಮತ್ತು ಮರದ ಹುಡಿ ಬೆರೆಸಲಾಗುವುದು ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.