ಸ್ಫೋಟದಿಂದಾಗಿ ಬೆಂಕಿಗಾಹುತಿಯಾದ ದುಬೈನ ಜಬಲ್ ಅಲಿ ಬಂದರು

Prasthutha|

ದುಬೈ: ಇಲ್ಲಿನ ಜಬಲ್ ಅಲಿ ಬಂದರಿನಲ್ಲಿ ಸ್ಪೋಟ ಸಂಭವಿಸಿ ಬೆಂಕಿ ಹತ್ತಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುಬೈ ಅಗ್ನಿಶಾಮಕ ದಳದವರು ಮತ್ತು ಎಮಿರೇಟ್ ನ ವಿವಿಧ ಸರ್ಕಾರಿ ಇಲಾಖೆಗಳ ತ್ವರಿತ ಪ್ರತಿಕ್ರಿಯೆಯು 40 ನಿಮಿಷಗಳಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ದುಬೈ ಮಾಧ್ಯಮ ಕಚೇರಿ ತಿಳಿಸಿದೆ.

- Advertisement -

ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬಂದರಿನಿಂದ ಸ್ಫೋಟದ ಶಬ್ದ ಕೇಳುತ್ತಿದೆ ಎಂದು ದುಬೈನ ಅನೇಕ ಭಾಗಗಳಲ್ಲಿನ ನಿವಾಸಿಗಳು ಹೇಳಿದ್ದಾರೆ. ಮುಖ್ಯ ಹಡಗು ಮಾರ್ಗದಿಂದ ದಡಕ್ಕೆ ಹೋಗಲು ಸಿದ್ಧವಾಗುತ್ತಿರುವ ಹಡಗಿನ ಕಂಟೇನರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಡಾಕ್ ಸೈಡ್ 14 ರಲ್ಲಿ ಸಣ್ಣ ಗಾತ್ರದ ಸರಕು ಹಡಗಿನಲ್ಲಿ ಬೆಂಕಿ ಸಂಭವಿಸಿದೆ ಎಂದು ದುಬೈ ಪೊಲೀಸ್ ನ ಕಮಾಂಡರ್-ಇನ್-ಚೀಫ್ ಲೆಫ್ಟಿನೆಂಟ್ ಜನರಲ್ ಅಬ್ದುಲ್ಲಾ ಖಲೀಫಾ ಅಲ್ ಮರ್ರಿ ತಿಳಿಸಿದ್ದಾರೆ.

ಹಡಗಿನಲ್ಲಿ 130 ಕಂಟೇನರ್ ಗಳನ್ನು ಸಾಗಿಸಲಾಗುತ್ತಿತ್ತು. ಮೂರು ಕಂಟೇನರ್ ಗಳಲ್ಲಿ ಉರಿಯುವ ವಸ್ತುಗಳು ಇದ್ದವು. ಒಳಗೆ ಯಾವುದೇ ಸ್ಫೋಟಕಗಳು ಅಥವಾ ವಿಕಿರಣಶೀಲ ವಸ್ತುಗಳು ಇರಲಿಲ್ಲ. ಹಡಗಿನಲ್ಲಿದ್ದ ಎಲ್ಲಾ ನಾವಿಕರನ್ನು ಸ್ಥಳಾಂತರಿಸಲಾಗಿದೆ ಮತ್ತು ಯಾವುದೇ ಸಾವು ನೋವು ವರದಿಯಾಗಿಲ್ಲ ” ಎಂದು ಲೆಫ್ಟಿನೆಂಟ್ ಜನರಲ್ ಅಲ್ ಮರ್ರಿ ಹೇಳಿದ್ದಾರೆ.



Join Whatsapp