ನವದೆಹಲಿ: ಕೇಂದ್ರ ಮಾಜಿ ಸಚಿವ ದಿ.ಪಿ. ರಂಗರಾಜನ್ ಕುಮಾರಮಂಗಲಂ ಅವರ ಪತ್ನಿ 68 ವರ್ಷದ ಕಿಟ್ಟಿ ಕುಮಾರಮಂಗಲಂ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ದೆಹಲಿಯ ವಸಂತ ವಿಹಾರ್ ಪ್ರದೇಶದಲ್ಲಿನ ಮನೆಯಲ್ಲಿ ಕಿಟ್ಟಿ ಕುಮಾರಮಂಗಲಂ ಹತ್ಯೆಯಾಗಿದ್ದಾರೆ. ಅವರ ಕೆಲಸದವರಿಂದಲೇ ಹತ್ಯೆಯಾಗಿದ್ದಾರೆ ಎನ್ನಲಾಗಿದೆ.
ಪೊಲೀಸರ ಪ್ರಕಾರ, ಇದು ಕೊಲೆ ಮತ್ತು ದರೋಡೆ ಪ್ರಕರಣವಾಗಿದೆ. ಮನೆ ಕೆಲಸದವನು ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಕುಮಾರಮಂಗಲಂ ಅವರ ಮನೆಗೆ ಬಂದಿದ್ದಾನೆ. ಸೇವಕಿ ಬಾಗಿಲು ತೆರೆದಾಗ, ಆಕೆಯನ್ನು ತಳ್ಳಿ ಒಳ ಪ್ರವೇಶಿಸಿ ಆಕೆಯನ್ನು ಕೋಣೆಯಲ್ಲಿ ಕೂಡಿ ಹಾಕಿರುವುದಾಗಿ ತಿಳಿದು ಬಂದಿದೆ. ಬಳಿಕ ಕಿಟ್ಟಿ ಕುಮಾರಮಂಗಲಂ ಹತ್ಯೆ ಗೈದು ಹಣ ಹಾಗೂ ಆಭರಣ ದೋಚಿಕೊಂಡು ಪರಾರಿಯಾಗಿದ್ದಾರೆ
ಹತ್ಯೆಗೆ ಸಂಬಂಧಿಸಿದಂತೆ ರಾಜು ಎಂಬತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತರ ಇಬ್ಬರು ಆರೋಪಿಗಳಿಗೆ ಶೋಧ ನಡೆಯುತ್ತಿದೆ ಎಂದು ಪೋಲಿಸರು ತಿಳಿಸಿದ್ದಾರೆ.