ಮಂಗಳೂರು : ದುಬೈನಿಂದ ಅಕ್ರಮವಾಗಿ ಚಿನ್ನವನ್ನು ಗುದನಾಳದಲ್ಲಿ ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರಿನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ದುಬೈನಿಂದ ಆಗಮಿಸಿದ ಕೇರಳದ ಕಾಸರಗೋಡಿನ ಮೊಹಿದಿನ್ ಮುನಾಸಿರ್ ಪದಿನಾರ್ ಮೊಹಮದ್ ಎಂಬಾತ ತನ್ನ ಗುದನಾಳದಲ್ಲಿ ಚಿನ್ನ ಅಡಗಿಸಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲಿಸುತ್ತಿದ್ದಾಗ ಗುದನಾಳದಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಈತನಿಂದ 20.89 ಲಕ್ಷ ರೂಪಾಯಿ ಮೌಲ್ಯದ 430 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ವಿಚಾರಣೆ ಮುಂದುವರೆದಿದೆ.