26 ವರ್ಷಗಳ ಹಿಂದೆ ಅಪಘಾತ ಎಸಗಿದ ಬಸ್‌ ಚಾಲಕನಿಗೆ 2,000 ರೂ. ದಂಡ ವಿಧಿಸಿದ ಸುಪ್ರೀಂ ಕೋರ್ಟ್‌

Prasthutha|

ನವದೆಹಲಿ : ಸುಮಾರು 26 ವರ್ಷಗಳ ಹಿಂದಿನ ಯದ್ವಾತದ್ವಾ ವಾಹನ ಚಾಲನೆಯಿಂದ ಆದ ಅಪಘಾತಕ್ಕಾಗಿ ಸುಪ್ರೀಂ ಕೋರ್ಟ್‌ ಬಸ್‌ ಚಾಲಕರೊಬ್ಬರಿಗೆ 2000 ರೂ. ದಂಡ ವಿಧಿಸಿದೆ.

- Advertisement -

1995 ಫೆಬ್ರವರಿ 16ರಂದು ಸುರೇಂದ್ರನ್‌ ಎಂಬಾತ ಬಸ್‌ ಚಲಾಯಿಸುತ್ತಿದ್ದಾಗ ಸಂಭವಿಸಿದ ಅಪಘಾತದಿಂದಾಗಿ ಕಾರು ಚಾಲಕನೊಬ್ಬ ಗಾಯಕ್ಕೊಳಗಾಗಿದ್ದ.

ಈ ಸಂಬಂಧ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆರು ತಿಂಗಳು ಜೈಲು ಮತ್ತು 500ರೂ ದಂಡ ವಿಧಿಸಲಾಗಿತ್ತು. ಈ ಬಗ್ಗೆ ಹೈಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿ, ಹೈಕೋರ್ಟ್‌ ಒಂದು ತಿಂಗಳು ಜೈಲು ವಿಧಿಸಿತ್ತು. ಆದರೆ, ಇದೀಗ ಸುಪ್ರೀಂ ಕೋರ್ಟ್‌ 2000 ರೂ. ದಂಡ ವಿಧಿಸಿದೆ.

- Advertisement -

ತಾನು ಜೈಲಿಗೆ ಹೋದರೆ ಕುಟುಂಬದಲ್ಲಿ ಬೇರೆ ಯಾರೂ ದುಡಿಯುವವರಿಲ್ಲದ ಕಾರಣ, ತನ್ನ ಕುಟುಂಬಕ್ಕೆ ತೊಂದರೆಯಾಗಲಿದೆ ಎಂದು ಸುರೇಂದ್ರನ್‌ ಕೋರ್ಟ್‌ ಗೆ ಮನವರಿಕೆ ಮಾಡಿದ್ದರು.



Join Whatsapp