ಗುವಾಹತಿ : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರ, ನೂತನ ಶಾಸಕ ಅಖಿಲ್ ಗೊಗೊಯಿ ವಿರುದ್ಧ ದಾಖಲಾಗಿದ್ದ ಯುಎಪಿಎ ಮತ್ತು ದೇಶದ್ರೋಹ ಕಾಯ್ದೆಯಡಿ ಕೇಸ್ ಗಳನ್ನು ಎನ್ ಐಎ ಕೋರ್ಟ್ ಕೈಬಿಟ್ಟಿದೆ. ಹೀಗಾಗಿ 2019, ಡಿಸೆಂಬರ್ ನಿಂದ ಜೈಲಿನಲ್ಲಿರುವ ಗೊಗೊಯಿ ಶೀಘ್ರವೇ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಅವರ ನ್ಯಾಯವಾದಿ ತಿಳಿಸಿದ್ದಾರೆ.
ಅಸ್ಸಾಂನಲ್ಲಿ ಸಿಎಎ ವಿರೋಧಿ ಹೋರಾಟಗಳ ಸಂದರ್ಭ ನಡೆದಿದ್ದ ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿ ಭಯೋತ್ಪಾದನೆ ನಿಗ್ರಹದ ಕಾನೂನಿನಡಿ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಎರಡು ಠಾಣೆಗಳಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ ಒಂದು ಪ್ರಕರಣವನ್ನು ಎನ್ ಐಎ ಕೈಬಿಟ್ಟಿತ್ತು. ಇದೀಗ ಉಳಿದಿದ್ದ ಇನ್ನೊಂದು ಪ್ರಕರಣದಲ್ಲೂ ಗೊಗೊಯಿ ಅವರನ್ನು ಕೈಬಿಡಲಾಗಿದೆ.
ಜೈಲಿನಲ್ಲಿರುವ ಗೊಗೊಯಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿದ್ದಾರೆ.