ನವದೆಹಲಿ : ಲಾಕ್ ಡೌನ್ ನಿಂದಾಗಿ ಕೆಲಸ ಕಳೆದುಕೊಂಡು ಮತ್ತು ಈಗಾಗಲೇ ಸಾಕಷ್ಟು ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟವನ್ನು ಎದುರಿಸುತ್ತಿರುವ ಸಾಮಾನ್ಯ ಜನರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಿದೆ. ಇಂದಿನಿಂದ ಜಾರಿಗೆ ಬರುವಂತೆ ಸಬ್ಸಿಡಿ ರಹಿತ ಎಲ್ ಪಿಜಿ ಬೆಲೆ ಸಿಲಿಂಡರ್ ಗೆ 25.50 ರೂ. ಏರಿಕೆಯಾಗಿದೆ.
ಪ್ರಸ್ತುತ 14.2 ಕೆ.ಜಿ. ತೂಕದ ಗೃಹ ಬಳಕೆ ಸಿಲಿಂಡರ್ ಗಳಿಗೆ ದೆಹಲಿಯಲ್ಲಿ 834.50 ರೂ. ಇದೆ. 19 ಕೆಜಿ ಸಿಲಿಂಡರ್ ಬೆಲೆ ಕೂಡ 76 ರೂ. ಹೆಚ್ಚಿಸಲಾಗಿದ್ದು, ದೆಹಲಿಯಲ್ಲಿ 1550 ರೂ. ಆಗಿದೆ. ದೇಶದಲ್ಲಿ ಪ್ರತಿ ತಿಂಗಳ ಆರಂಭದಲ್ಲಿ ಸಿಲಿಂಡರ್ ಬೆಲೆ ನಿಗದಿ ಪಡಿಸಲಾಗುತ್ತದೆ.
ಮುಂಬೈನಲ್ಲಿ 14.2 ಕೆಜಿ ಸಿಲಿಂಡರ್‌ಗೆ 834.50 ರೂ. ಕೋಲ್ಕತ್ತಾದಲ್ಲಿ 861 ರೂ. ಚೆನ್ನೈನಲ್ಲಿ 850.50 ರೂ. ಲಕ್ನೋದಲ್ಲಿ ಸಿಲಿಂಡರ್ ಬೆಲೆ 872.50 ರೂ. ಅಹಮದಾಬಾದ್‌ನಲ್ಲಿ 841.50 ಆಗಿದೆ.