ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕಮರುದ್ದೀನ್ ಸಾಲ್ಮರ ನೇಮಕ

Prasthutha|

ಮಂಗಳೂರು: ಕರ್ನಾಟಕ ಸರಕಾರದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದಲ್ಲಿರುವ, ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿಯ, ಸದಸ್ಯರನ್ನಾಗಿ ಪುತ್ತೂರಿನ ಸಾಹಿತಿ, ಕವಿ ಮತ್ತು ಹಾಡುಗಾರ, ಕಮರುದ್ದೀನ್ ಸಾಲ್ಮರ ಅರವರನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ,ಅಧ್ಯಕ್ಷ ರಹೀಮ್ ಉಚ್ಚಿಲ್ ನೇಮಕಗೊಳಿಸಿ ಆದೇಶಿಸಿದ್ದಾರೆ.

- Advertisement -

 ಕಮರುದ್ದಿನ್ ಸಾಲ್ಮರ ಅವರು ಹಲವಾರು ವರ್ಷಗಳಿಂದ ಸಾಹಿತ್ಯ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸೌಹಾರ್ದ ಹಾಡುಗಳು ಮೂಲಕ ಪ್ರಸಿದ್ಧರಾಗಿರುತ್ತಾರೆ. ಇವರು ರಚಿಸಿ ಹಾಡಿದ ” ಎವು ಡೆ ವುಳ್ಳೆ ನೀ” ಎಂಬ ಬ್ಯಾರಿ ಹಾಡುಗಳನ್ನು ಒಳಗೊಂಡ ಕ್ಯಾಸೆಟ್ ಈಗಲೂ ಜನಪ್ರಿಯವಾಗಿದೆ. ಇವರು ಪುತ್ತೂರು ಸಾಲ್ಮರ ನಿವಾಸಿಯಾಗಿದ್ದು, ಸಾಲ್ಮರ ಮನೆತನದ, ದಿವಂಗತ ಅಬ್ದುಲ್ ರಹಿಮಾನ್ ಹಾಗೂ ನಫೀಸಾ ದಂಪತಿ ಸುಪುತ್ರ.



Join Whatsapp