ಜು.7ರಿಂದ ಕೇರಳ – ದುಬೈ ವಿಮಾನ ಹಾರಾಟ ಆರಂಭ

Prasthutha|

ತಿರುವನಂತಪುರಂ : ಕೋವಿಡ್‌ ಎರಡನೇ ಅಲೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕೇರಳ-ದುಬೈ ವಿಮಾನ ಸಂಚಾರ ಜು.7ರಿಂದ ಆರಂಭಗೊಳ್ಳಲಿದೆ. ಜು.7ರಿಂದ ಕೇರಳದಿಂದ ದುಬೈಗೆ ವಿಮಾನ ಹಾರಾಟ ಮರು ಆರಂಭಿಸಲಿವೆ ಎಂದು ಫ್ಲೈ ದುಬೈ ಮತ್ತು ಎಮಿರೇಟ್ಸ್‌ ಏರ್‌ ಲೈನ್ಸ್‌ ಸಂಸ್ಥೆಗಳು ತಿಳಿಸಿವೆ.

- Advertisement -

ಸೇವೆಗಳ ಪುನಾರಂಭಕ್ಕೆ ಸಂಬಂಧಿಸಿ ನಾಗರಿಕ ವಿಮಾನಯಾನ ಪ್ರಾಧಿಕಾರದಿಂದ ಒಪ್ಪಿಗೆ ಸಿಕ್ಕಿದೆ. ಆ ಪ್ರಕಾರ, ಜು.3ರಿಂದ ಹೈದರಾಬಾದ್‌ ನಿಂದ ಮತ್ತು ಜು.7ರಿಂದ ಕೇರಳದಿಂದ ವಿಮಾನಗಳು ದುಬೈಗೆ ಸಂಚರಿಸಲಿವೆ.

ಕೋವಿಡ್‌ ಲಸಿಕೆಯ ಎರಡು ಡೋಸ್‌ ಗಳನ್ನೂ ಪಡೆದವರು ಮಾತ್ರ ಗಲ್ಫ್‌ ರಾಷ್ಟ್ರಕ್ಕೆ ಪ್ರಯಾಣಿಸಬಹುದು ಎಂದು ಯುಎಇ ಷರತ್ತು ಹಾಕಿದೆ.



Join Whatsapp