ಲಖನೌ : ಮಾಸ್ಕ್ ಹಾಕದೆ ಬ್ಯಾಂಕ್ ಪ್ರವೇಶಿಸಿದ್ದಕ್ಕೆ ಬ್ಯಾಂಕ್ ಗ್ರಾಹಕರೊಬ್ಬರಿಗೆ ಅಲ್ಲಿನ ಭದ್ರತಾ ಸಿಬ್ಬಂದಿ ಗುಂಡಿಕ್ಕಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಭದ್ರತಾ ಸಿಬ್ಬಂದಿ ಈ ಕೃತ್ಯ ಎಸಗಿದ್ದಾನೆ.
ಗ್ರಾಹಕನ ಕಾಲಿಗೆ ಗುಂಡೇಟು ತಗುಲಿದೆ. ರೈಲ್ವೆ ನೌಕರ ರಾಜೇಶ್ ಕುಮಾರ್ ಎಂಬವರು ಗುಂಡಿನ ದಾಳಿಗೆ ಗುರಿಯಾದ ವ್ಯಕ್ತಿ. ಮಾಸ್ಕ್ ಧರಿಸುವ ವಿಚಾರವಾಗಿ ಭದ್ರತಾ ಸಿಬ್ಬಂದಿ ಜೊತೆ ರಾಜೇಶ್ ಕುಮಾರ್ ವಾಗ್ವಾದ ಮಾಡಿದ್ದರು. ಈ ವಾಗ್ವಾದ ಈ ಘಟನೆಗೆ ಕಾರಣವಾಗಿದೆ.
ರಾಜೇಶ್ ಕುಮಾರ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕಾಗಮಿ, ಕ್ರಮ ಕೈಗೊಂಡಿದ್ದಾರೆ. ಗ್ರಾಹಕನಿಗೆ ಗುಂಡಿಕ್ಕಿದ ಭದ್ರತಾ ಸಿಬ್ಬಂದಿ ಕೇಶವ್ ಪ್ರಸಾದ್ ಮಿಶ್ರಾ ಎಂದು ಗುರುತಿಸಲಾಗಿದೆ.