ವಿರೋಧದ ನಡುವೆಯೂ ಲಕ್ಷ‌ದ್ವೀಪದಲ್ಲಿ ಶೆಡ್ ತೆರವಿಗೆ ಆದೇಶ

Prasthutha|

ಇತಿಹಾಸದಲ್ಲೇ ಮೊದಲ ಬಾರಿಗೆ ಜೈಲು ಐಜಿ ನೇಮಕ!

- Advertisement -

ಕವರತ್ತಿ: ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಕೈಗೊಂಡ ಜನ ವಿರೋಧಿ ಕ್ರಮಗಳ ವಿರುದ್ಧ ಭುಗಿಲೆದ್ದಿರುವ ಪ್ರತಿಭಟನೆಗಳ ನಡುವೆ ಲಕ್ಷದ್ವೀಪ ಆಡಳಿತ ಮತ್ತೊಮ್ಮೆ ಜನ ವಿರೋಧಿ ಆದೇಶ ಹೊರಡಿಸಿದ್ದು, ಲಕ್ಷದ್ವೀಪದ ಚೆರಿಯಂ ದ್ವೀಪದಲ್ಲಿರುವ ಶೆಡ್‌ಗಳನ್ನು ಒಂದು ವಾರದೊಳಗೆ ಧ್ವಂಸಗೊಳಿಸಬೇಕೆಂದು ಆದೇಶಿಸಲಾಗಿದೆ.

ಮೀನುಗಾರರು ಅಕ್ರಮವಾಗಿ ನಿರ್ಮಿಸಿದ ಶೆಡ್‌ಗಳನ್ನು ಒಂದು ವಾರದೊಳಗೆ ಧ್ವಂಸಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸ್ವಯಂ ಮೀನುಗಾರರೇ ಶೆಡ್ ಅನ್ನು ಧ್ವಂಸಗೊಳಿಸದಿದ್ದರೆ ಕಂದಾಯ ಇಲಾಖೆ ಅದನ್ನು ನೆಲಸಮ ಮಾಡಬೇಕಾದೀತು. ಒಂದು ವೇಳೆ ಕಂದಾಯ ಇಲಾಖೆ ಶೆಡ್ ಅನ್ನು ಧ್ವಂಸಗೊಳಿಸಬೇಕಾಗಿ ಬಂದರೆ ಮೀನುಗಾರರೇ ಅದರ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

- Advertisement -

ಈ ಹಿಂದೆ ಲಕ್ಷದ್ವೀಪ ಆಡಳಿತ ಮೀನುಗಾರರ ಶೆಡ್‌ಗಳನ್ನು ನೆಲಸಮಗೊಳಿಸಿದಾಗ ಪ್ರತಿಭಟನೆ ಭುಗಿಲೆದ್ದಿತ್ತು. ಈ ನಡುವೆ ಅಪರಾಧ ಕೃತ್ಯಗಳು ಕಡಿಮೆ ಇರುವ ಲಕ್ಷದ್ವೀಪದ ಇತಿಹಾಸದಲ್ಲಿ ಮೊದಲ ಬಾರಿಗೆ ಜೈಲು ಐಜಿಯನ್ನು ನೇಮಿಸಲಾಗಿದೆ. ದ್ವೀಪವಾಸಿಗಳನ್ನು ನಿಂದಿಸಿ ವಿವಾದ ಸೃಷ್ಠಿಸಿದ್ದ ಕಲೆಕ್ಟರ್ ಅಸ್ಗರ್ ಅಲಿಗೆ ಇನ್ಸ್‌ಪೆಕ್ಟರ್ ಜನರಲ್ ಆಫ್ ಪ್ರಿಸನ್ಸ್ ನ ಮಧ್ಯಂತರ ಜವಾಬ್ಧಾರಿ ನೀಡಲಾಗಿದೆ.

ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ಇತರ ರಾಜ್ಯಗಳಿಗಿಂತ ಕಡಿಮೆ ಅಪರಾಧ ಪ್ರಮಾಣವನ್ನು ಹೊಂದಿರುವ ಲಕ್ಷದ್ವೀಪದಲ್ಲಿ ಜೈಲುಗಳ ಉಸ್ತುವಾರಿಗಾಗಿ ಉನ್ನತ ಹುದ್ದೆಯ ಅಧಿಕಾರಿಯನ್ನು ನೇಮಿಸಲಾಗಿದೆ.



Join Whatsapp