ʼಖೇಲಾ ಹೋಬ್‌ʼ ಯಶಸ್ಸಿನ ನಂತರ, ಈಗ ಉ.ಪ್ರ. ಚುನಾವಣೆಗೆ ಬಿಜೆಪಿ ವಿರುದ್ಧ ಎಸ್ಪಿಯಿಂದ ʼಖೇಲಾ ಹೋಯಿʼ ಸವಾಲು!

Prasthutha|

ಲಖನೌ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ʼಖೇಲಾ ಹೋಬ್‌ʼ ಸವಾಲಿನ ಪ್ರಚಾರದಲ್ಲಿ ಯಶಸ್ವಿಯಾದ ಬಳಿಕ, ಈಗ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (ಎಸ್‌ ಪಿ) ಬಿಜೆಪಿಗೆ ಇದೇ ಮಾದರಿಯ ಸವಾಲೊಡ್ಡಿದೆ.  

- Advertisement -

ಕಾನ್ಪುರದ ಸಮಾಜವಾದಿ ಪಕ್ಷದ ನಾಯಕರೊಬ್ಬರು ಹೋರ್ಡಿಂಗ್‌ ಒಂದನ್ನು ಹಾಕಿಸಿದ್ದು, ಅದರಲ್ಲಿ ʼಅಬ್‌ ಯುಪಿ ಮೇ ಖೇಲಾ ಹೋಯಿʼ ಎಂಬ ಸಂದೇಶ ಹಾಕಿದ್ದಾರೆ. ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಹೋರ್ಡಿಂಗ್‌ ಕುತೂಹಲಕ್ಕೆ ಕಾರಣವಾಗಿದೆ.

ಹೋರ್ಡಿಂಗ್‌ ನಲ್ಲಿ ಸಮಾಜವಾದಿ ಪಕ್ಷದ ಸೈಕಲ್‌ ಚಿಹ್ನೆ, ಅಖಿಲೇಶ್‌ ಯಾದವ್‌ ಮತ್ತು ಸ್ಥಳೀಯ ನಾಯಕರ ಭಾವಚಿತ್ರಗಳಿವೆ.

- Advertisement -

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ವಿಧಾನಸಭಾ ಚುನಾವಣೆ ವೇಳೆ ʼಖೇಲಾ ಹೋಬ್‌ʼ ಎಂಬ ಘೋಷಣೆಯನ್ನು ಹೊರಡಿಸಿ, ಬಿಜೆಪಿಯನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ಘೋಷಣೆಯನ್ನು ಎಸ್ಪಿ ʼಅಬ್‌ ಯುಪಿ ಮೇ ಖೇಲಾ ಹೋಯಿʼ ಎಂದು ಬಳಸಿ ಬಿಜೆಪಿಗೆ ಸವಾಲೊಡ್ಡಲಿದೆಯೇ? ಎಂಬ ಬಗ್ಗೆ ಚರ್ಚೆಗಳಾಗುತ್ತಿವೆ.  



Join Whatsapp