ಮುಂಬೈ: ಸಲ್ಮಾನ್ ಖಾನ್ ವಿರುದ್ದ ಮಾನಹಾನಿಕಾರಕ ವಿಚಾರಗಳನ್ನು ಪೋಸ್ಟ್ ಮಾಡದಂತೆ ನಟ ಕಮಾಲ್ ಆರ್ ಖಾನ್ ಗೆ ಮುಂಬೈ ಹೈಕೋರ್ಟ್ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಗೆ ಒಂದಿಲ್ಲೊಂದು ವಿಚಾರಕ್ಕೆ ಹರಿಹಾಯುತ್ತಿದ್ದ ನಟ ಕಮಾಲ್ ಆರ್ ಖಾನ್‌ಗೆ ತೀವ್ರ ಹಿನ್ನಡೆ ಉಂಟಾಗಿದೆ.
ಹಲವು ದಿನಗಳಿಂದ ಸಲ್ಮಾನ್ ಖಾನ್ ಅವರ ಮೇಲೆ ಕಮಾಲ್ ಖಾನ್ ಅವರು ಪದೇ ಪದೇ ಆರೋಪಗಳನ್ನು ಮಾಡುತ್ತಾ ಬಂದಿದ್ದರು. ಸಲ್ಮಾನ್ ಖಾನ್ ಸಿನಿಮಾ ನಿರ್ಮಾಣ ಸಂಸ್ಥೆಯಲ್ಲಿ ದರೋಡೆ , ಭ್ರಷ್ಟಾಚಾರಿ ಮತ್ತು ಅವರ ಬೀಯಿಂಗ್ ಹ್ಯೂಮನ್ ಬ್ರಾಂಡ್‌ನಲ್ಲಿ ಮೋಸ ಮಾಡುತ್ತಿದ್ದಾರೆ ಎಂದೆಲ್ಲ ಈ ಹಿಂದೆ ಕಮಾಲ್ ಖಾನ್ ಮಾತನಾಡಿದ್ದರು .
ಈ ವಿಷಯಕ್ಕೆ ಸಲ್ಮಾನ್ ಖಾನ್ ಕಮಾಲ್ ಖಾನ್ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಅರ್ಜಿ ವಿಚಾರಣೆ ತನಿಖೆ ನಡೆಸಿದ ಮುಂಬೈ ಸಿವಿಲ್ ಕೋರ್ಟ್ ನೇರವಾಗಿ ಅಥವಾ ಪರೋಕ್ಷವಾಗಿ ಸಲ್ಮಾನ್ ವಿರುದ್ದ ಅಥವಾ ಅವರಿಗೆ ಸಂಬಂಧಿಸಿದ ಉದ್ಯಮ, ಸಂಸ್ಥೆ ಬಗ್ಗೆ ಆರೋಪ ಮಾಡಿ ಖ್ಯಾತಿ ಅನ್ನೊದನ್ನು ಯಾರೂ ಹಾಳು ಮಾಡಬಾರದು ಎಂದು ಹೇಳಿದೆ .
ತಾನು ರಾಧೆ ಸಿನಿಮಾವನ್ನು ನಿಷ್ಠುರವಾಗಿ ವಿಮರ್ಶೆ ಮಾಡಿದ್ದಕ್ಕಾಗಿಯೆ ಸಲ್ಮಾನ್ ಖಾನ್ ಅವರು ತಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ ಎಂದು ಕಮಾಲ್ ಖಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು .
ಒಟ್ಟಿನಲ್ಲಿ ರಾಧೆ ಸಿನಿಮಾವನ್ನು ವಿಮರ್ಶೆ ಮಾಡಿದ್ದಕ್ಕೂ ಈ ಮಾನನಷ್ಟ ಮೊಕದ್ದಮೆಗೂ ಯಾವುದೇ ಸಂಬಂಧ ಇಲ್ಲ ಎಂಬುದು ಬಯಲಾಗಿದೆ .