ಪಿಎನ್‌ ಬಿ ಹಗರಣ : ಭಾರತಕ್ಕೆ ಹಸ್ತಾಂತರ ತಡೆ ಕೋರಿ ನೀರವ್‌ ಮೋದಿ ಸಲ್ಲಿಸಿದ್ದ ಅರ್ಜಿ ನಿರಾಕರಿಸಿದ ಲಂಡನ್‌ ಹೈಕೋರ್ಟ್‌

Prasthutha|

ನವದೆಹಲಿ : ಪಿಎನ್‌ ಬಿ ಹಗರಣದಲ್ಲಿ ಸುಮಾರು 14,000 ಕೋಟಿ ರೂ. ವಂಚನೆ ಎಸಗಿ ವಿದೇಶಕ್ಕೆ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ನೀರವ್‌ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ವಿರೋಧಿಸಿ ಸಲ್ಲಿಸಿದ ಮೇಲ್ಮನವಿಯನ್ನು ಬುಧವಾರ ಯುಕೆ ಹೈಕೋರ್ಟ್‌ ತಿರಸ್ಕರಿಸಿದೆ. ನೀರವ್‌ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಆದೇಶವಾಗಿತ್ತು, ಆದರೆ ಅದರ ವಿರುದ್ಧ ಅವರು ಲಂಡನ್ ಹೈಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ‌

- Advertisement -

ಕಾಗದದಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಕೆಯ ಅವಕಾಶವನ್ನು ಲಂಡನ್‌ ಹೈಕೋರ್ಟ್‌ ನಿರಾಕರಿಸಿರುವ ಬಗ್ಗೆ ವರದಿಗಳು ದೃಢಪಡಿಸಿವೆ. ಆದರೆ, ಮೇಲ್ಮನವಿ ಅರ್ಜಿ ಮುಂದುವರಿಸಬಹುದೇ? ಇಲ್ಲವೇ? ಎಂಬುದನ್ನು ತಿಳಿಯಲು ಹೊಸ ಮೇಲ್ಮನವಿ ಅರ್ಜಿಯೊಂದಿಗೆ ಹೈಕೋರ್ಟ್‌ ನಲ್ಲಿ ಸಂಕ್ಷಿಪ್ತ ಮೌಖಿಕ ವಿಚಾರಣೆಯನ್ನು ನೀರವ್‌ ಮೋದಿ ಎದುರಿಸಬೇಕಾಗುತ್ತದೆ.

ನೀರವ್‌ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಏಪ್ರಿಲ್‌ 15ರ, 2020ರಂದು ಯು.ಕೆ. ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್‌ ಆದೇಶ ಹೊರಡಿಸಿದ್ದರು. 2019, ಮಾ.19ರಲ್ಲಿ ಬಂಧಿಸಲ್ಪಟ್ಟಿದ್ದ ನೀರವ್‌ ಮೋದಿ ಲಂಡನ್‌ ವಾಂಡ್ಸ್‌ ವರ್ತ್‌ ಜೈಲಿನಲ್ಲಿದ್ದಾರೆ. ನೀರವ್‌ ಮೋದಿ 2018, ಜ.1ರಂದು ಭಾರತದಿಂದ ಪರಾರಿಯಾಗಿದ್ದರು.



Join Whatsapp