ಇರಾನ್ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ರೈಸಿ ಆಯ್ಕೆ

Prasthutha|

ಟೆಹ್ರಾನ್: ಇರಾನ್ ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದ, ಧರ್ಮಗುರು ಇಬ್ರಾಹಿಂ ರೈಸಿ ಇರಾನ್ ನ ನೂತನ ಅಧ್ಯಕ್ಷರಾಗಿ ಶನಿವಾರ (ಜೂನ್ 19) ಆಯ್ಕೆಯಾಗಿದ್ದಾರೆ. ರೈಸಿ ಆಯ್ಕೆಯನ್ನು ವಿದೇಶಾಂಗ ಸಚಿವ ಮೊಹಮ್ಮದ್ ಜರೀಫ್ ಘೋಷಿಸಿದ್ದಾರೆ.

- Advertisement -

ಇರಾನ್ ಅಧ್ಯಕ್ಷ ಚುನಾವಣೆಯಲ್ಲಿ ರೈಸಿ ಸೇರಿದಂತೆ ನಾಲ್ವರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದರೆ ಈ ಬಾರಿ ಕಡಿಮೆ ಮತದಾನವಾಗಿದ್ದು, ರೈಸಿ ಅವರ ಪರ 1.78 ಕೋಟಿ ಮತ ಚಲಾವಣೆಯಾಗಿತ್ತು. ಅಲ್ಲದೇ ರೈಸಿ ಅವರ ಪ್ರತಿಸ್ಪರ್ಧಿ ಮೊಹಸೆನ್ ರೆಜಿ 33 ಲಕ್ಷ ಮತ ಪಡೆದಿರುವುದಾಗಿ ಅಲ್ ಜಝೀರ ವರದಿ ಮಾಡಿದೆ.

ನ್ಯಾಯಾಂಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ರೈಸಿ ಅವರು ಅಧ್ಯಕ್ಷ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ವರದಿ ವಿವರಿಸಿದೆ. ರೈಸಿ ಅವರ ವಿರುದ್ಧ ಸ್ಪರ್ಧಿಸಿದ್ದ ಅಭ್ಯರ್ಥಿಗಳನ್ನು ಅನರ್ಹಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.

- Advertisement -

ರೈಸಿ ಅವರು ಇರಾನ್ ಉನ್ನತ ನಾಯಕ ಆಯತೊಲ್ಲಾ ಖಮೇನಿ ಅವರ ಆಪ್ತರಾಗಿದ್ದಾರೆ. ಸರ್ವೋಚ್ಛ ನಾಯಕ ಖಮೇನಿ ಮತ್ತು ನಿಮ್ಮ ನೇತೃತ್ವದಲ್ಲಿ ಸರ್ಕಾರ ಜನರ ಆಶೋತ್ತರಗಳನ್ನು ಈಡೇರಿಸಲಿದೆ ಎಂಬ ಭರವಸೆ ಇದೆ ಎಂದು ಅಬ್ದುಲ್ ನಾಸರ್ ಹೆಮ್ಮಟಿ ಶುಭಾಶಯ ಪತ್ರದಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.



Join Whatsapp