ಮುಸ್ಲಿಂ ವೃದ್ಧನಿಗೆ ಥಳಿತ ಪ್ರಕರಣ | ಸಂತ್ರಸ್ತರು ನೀಡಿರುವ ದೂರಿನ ಅಂಶಗಳನ್ನು ಪೊಲೀಸರು ಪರಿಗಣಿಸಿಲ್ಲ : ಅಸಾದುದ್ದೀನ್‌ ಒವೈಸಿ

Prasthutha|

ಹೈದರಾಬಾದ್‌ : ಉತ್ತರ ಪ್ರದೇಶದ ಲೋನಿಯಲ್ಲಿ ವೃದ್ಧ ವ್ಯಕ್ತಿಗೆ ಥಳಿಸಿದ ಘಟನೆಗೆ ಸಂಬಂಧಿಸಿ, ಅವರ ಮಗ ನೀಡಿರುವ ಅಧಿಕೃತ ದೂರಿನ ಅಂಶಗಳನ್ನು ಪೊಲೀಸರು ಪರಿಗಣಿಸಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಹೇಳಿದ್ದಾರೆ.

- Advertisement -

ಲೋನಿಯಲ್ಲಿ ನಡೆದ ಘಟನೆಯಲ್ಲಿ ಕೋಮು ದೃಷ್ಟಿಕೋನ ಇರಲಿಲ್ಲ ಎಂದು ಉತ್ತರ ಪ್ರದೇಶ ಪೊಲೀಸರು ಪ್ರತಿಪಾದಿಸಿದ ಬಳಿಕ ಒವೈಸಿ ಈ ಹೇಳಿಕೆ ನೀಡಿದ್ದಾರೆ.

“ತನ್ನ ತಂದೆಯನ್ನು ಅಪಹರಿಸಿದ, ಅಕ್ರಮ ಬಂಧನದಲ್ಲಿರಿಸಿದ ಮತ್ತು ಬಲವಂತವಾಗಿ ಅವರ ಗಡ್ಡ ಕತ್ತರಿಸಿದ ಎಲ್ಲಾ ಅಂಶಗಳ ಬಗ್ಗೆ ಸಂತ್ರಸ್ತನ ಮಗ ಮಾಧ್ಯಮಕ್ಕೆ ತಿಳಿಸಿದ್ದಾರೆ. ಆದರೆ, ಪೊಲೀಸರು ಎಫ್‌ ಐಆರ್‌ ನಲ್ಲಿ ಈ ಅಂಶಗಳನ್ನು ದಾಖಲಿಸಿಲ್ಲ” ಎಂದು ಒವೈಸಿ ಹೇಳಿದ್ದಾರೆ.

- Advertisement -

ಸಂತ್ರಸ್ತ ಮತ್ತು ಅವರ ಮಗ ಸ್ವಯಂ ಘಟನೆಯ ಬಗ್ಗೆ ವಿವರಣೆ ನೀಡಿರುವುದು ದಾಖಲಾಗಿದೆ. ನಾವು ಈ ಅಂಶಗಳ ಬಗ್ಗೆಯೂ ಗಮನ ಹರಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಲೋನಿಯಲ್ಲಿ ಮುಸ್ಲಿಂ ವೃದ್ಧನಿಗೆ ಥಳಿಸಿದ ಘಟನೆಗೆ ಸಂಬಂಧಿಸಿ ಐವರನ್ನು ಬಂಧಿಸಿದ್ದೇವೆ. ಆದರೆ, ಈ ಘಟನೆಯಲ್ಲಿ ಕೋಮು ದೃಷ್ಟಿಕೋನ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ, ತಪ್ಪ ಅಂಶಗಳನ್ನು ನೀಡಿದ್ದಕ್ಕಾಗಿ ದೂರುದಾರರ ವಿರುದ್ಧವೇ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಟ್ವಿಟರ್, ಸುದ್ದಿ ಸಂಸ್ಥೆಗಳು ಸೇರಿದಂತೆ ಹಲವು ಪತ್ರಕರ್ತರು, ಪ್ರಮುಖರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. ಅಂಶಗಳನ್ನು ಪರಿಶೀಲಿಸದೆ, ಘಟನೆಗೆ ಕೋಮುಬಣ್ಣ ನೀಡಿ, ಶಾಂತಿ ಹಾಳುಗೆಡವುವ ಮತ್ತು ಎರಡು ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಮೂಡುವ ಸಂದೇಶಗಳನ್ನು ಹರಡಲಾಗಿದೆ ಎಂದು ಪೊಲೀಸರು ಆಪಾದಿಸಿದ್ದಾರೆ.  



Join Whatsapp