UAEಯಲ್ಲಿ ಮಧ್ಯಾಹ್ನದ ವಿರಾಮ ಇಂದಿನಿಂದ ಜಾರಿ

Prasthutha|

UAEಯಲ್ಲಿ ಮಧ್ಯಾಹ್ನದ ವಿರಾಮ ಇಂದಿನಿಂದ ಜಾರಿಯಾಗಿದೆ. ಇದರೊಂದಿಗೆ, ಮಧ್ಯಾಹ್ನ 12.30 ರಿಂದ 3.30 ರವರೆಗೆ ತೆರೆದ ಸ್ಥಳಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ. ನಿಷೇಧ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಜೂನ್ 15 ರಿಂದ ಸೆಪ್ಟೆಂಬರ್ 15ರವರೆಗೆ ಮೂರು ತಿಂಗಳ ಕಾಲ ಮಧ್ಯಾಹ್ನ ವಿಶ್ರಾಂತಿ ಕಾಯ್ದೆ ಜಾರಿಯಲ್ಲಿರುತ್ತದೆ. 
ಬೇಸಿಗೆಯ ವಿಪರೀತ ಬಿಸಿಲಿನಲ್ಲಿ ಕೆಲಸ ಮಾಡುವವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಯುಎಇ ಕಾರ್ಮಿಕ ಸಚಿವಾಲಯವು ವರ್ಷಗಳಿಂದ ಮಧ್ಯಾಹ್ನ ವಿಶ್ರಾಂತಿ ಕಾಯ್ದೆಯನ್ನು ಜಾರಿಗೆ ತರುತ್ತಿದೆ. ಕಾನೂನು ಉಲ್ಲಂಘಿಸಿ ಕಾರ್ಮಿಕರನ್ನು ಬಿಸಿಲಿನಲ್ಲಿ ಕೆಲಸ ಮಾಡಿಸಿದರೆ, ಉದ್ಯೋಗದಾತರಿಗೆ ಪ್ರತಿ ಉದ್ಯೋಗಿಯಂತೆ 5,000 ದಿರ್ಹಮ್ ದಂಡ ವಿಧಿಸಲಾಗುತ್ತದೆ. ಕಾರ್ಮಿಕರ ಸಂಖ್ಯೆ ಹೆಚ್ಚಾದಂತೆ ದಂಡವು 50,000 ದಿರ್ಹಮ್ ಗಳವರೆಗೆ ಇರಬಹುದು.

ಕಾರ್ಮಿಕರಿಗೆ ಮಧ್ಯಾಹ್ನದ ವೇಳೆ ವಿಶ್ರಾಂತಿ ಸೌಲಭ್ಯ ಒದಗಿಸಬೇಕು. ಕುಡಿಯಲು ನೀರು ಮತ್ತು ಪಾನೀಯ ಲಭ್ಯವಾಗುವಂತೆ ಮಾಡಬೇಕು. ಕೆಲಸವು ಎಂಟು ಗಂಟೆಗಳನ್ನು ಮೀರಬಾರದು. ಹೆಚ್ಚುವರಿ ಸಮಯಕ್ಕಾಗಿ ಓವರ್ ಟೈಮ್ ಸೌಲಭ್ಯ ಒದಗಿಸಬೇಕು ಎಂದು ಸಚಿವಾಲಯ ಹೇಳಿದೆ.



Join Whatsapp