ಹೊಸದಿಲ್ಲಿ : ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಭಾಗವಾಗಿ ಭಾರತೀಯ ಸೇನಾ ತುಕಡಿಯಲ್ಲಿನ ಎಲ್ಲ 135 ಸೈನಿಕರಿಗೆ ವಿಶ್ವಸಂಸ್ಥೆಯು ದಕ್ಷಿಣ ಸುಡಾನ್‌ನಲ್ಲಿ ವಿಶೇಷ ಸೇವಾ ಪದಕಗಳನ್ನು ನೀಡಿ ಗೌರವಿಸಿದೆ. ಈ ಎಲ್ಲ ಯೋಧರಿಗೂ ವಿಶ್ವಸಂಸ್ಥೆಯ ಫೋರ್ಸ್ ಕಮಾಂಡರ್ ಅವರು ಪದಕ ನೀಡಿ ಸನ್ಮಾನಿಸಿದ್ದಾರೆ.
ವಿಶ್ವಸಂಸ್ಥೆಯ ದಕ್ಷಿಣ ಸುಡಾನ್ ಶಾಂತಿ ಪಾಲನಾ ಮಿಷನ್ (ಯುಎನ್‌ಎಂಐಎಸ್‌ಎಸ್) ವಿಭಾಗದ ಅಧಿಕೃತ ಟ್ವಿಟರ್ ನಲ್ಲಿ ಇದನ್ನು ಹಂಚಿಕೊಂಡಿದ್ದು, “ಭಾರತೀಯರೇ ನಿಮಗಿದೋ ನಮನ. ನಿಮ್ಮ ಸೈನಿಕರು ದಕ್ಷಿಣ ಸುಡಾನ್‌ನ ಜೊಂಗ್ಲೆ ರಾಜ್ಯ ಹಾಗೂ ಗ್ರೇಟರ್ ಪೈಬರ್ ಪ್ರಾಂತ್ಯದಲ್ಲಿ ಉತ್ತಮ ಸೇವೆ ನೀಡಿದ ಕಾರಣಕ್ಕಾಗಿ ವಿಶ್ವಸಂಸ್ಥೆಯ ವತಿಯಿಂದ ಪದಕಗಳನ್ನು ನೀಡಿ ಸಮ್ಮಾನಿ ಸಲಾಗಿದೆ’ ಎಂದು ತಿಳಿಸಿದೆ.