ಮೋದಿಯನ್ನು ಟೀಕಿಸಿದ ಖ್ಯಾತ ವ್ಯಂಗ್ಯಚಿತ್ರಕಾರನನ್ನ ಗೇಟ್ ಪಾಸ್ ಮಾಡಿದ ಅಂಬಾನಿ ಮಾಲಕತ್ವದ ನೆಟ್ ವರ್ಕ್ 18 ವಾಹಿನಿ

Prasthutha|

ಖ್ಯಾತ ರಾಜಕೀಯ ವ್ಯಂಗ್ಯಚಿತ್ರಕಾರ ಮಂಜುಲ್ ಅವರಿಗೆ ಭಾರತ ಸರಕಾರ ಟ್ವಿಟ್ಟರ್ ಹ್ಯಾಂಡಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ ಎಂದು ಹೇಳಿ ಟ್ವಿಟ್ಟರ್ ನೋಟಿಸ್ ಕಳುಹಿಸಿದ ಕೆಲವೇ ದಿನಗಳಲ್ಲಿ ನೆಟ್‍ವರ್ಕ್ 18 ವಾಹಿನಿ ಅವರನ್ನು ತಕ್ಷಣದಿಂದ ಸೇವೆಯಿಂದ ಅಮಾನತುಗೊಳಿಸಿದೆ.

- Advertisement -

ಮಂಜುಲ್ ಅವರು ಕಳೆದ ಆರು ವರ್ಷಗಳಿಂದ ನೆಟ್‍ವರ್ಕ್ 18ಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ.ಮಂಜುಲ್ ಅವರನ್ನು ಅಮಾನತುಗೊಳಿಸಬಹುದೆನ್ನುವ ಸುಳಿವು ನಮಗಿರಲಿಲ್ಲ, ಇದು ಅಚ್ಚರಿಯ ಕ್ರಮ ಎಂದು ನೆಟ್‍ವರ್ಕ್ 18 ಮೂಲಗಳು ತಿಳಿಸಿವೆ. ನೆಟ್ ವರ್ಕ್ 18 ವಾಹಿನಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಡೆತನಕ್ಕೆ ಸೇರಿದ್ದು ಎಂಬುದು ಇಲ್ಲಿ ಉಲ್ಲೇಖಾರ್ಹ.

ತಮ್ಮ ಟ್ವಿಟ್ಟರ್ ಹ್ಯಾಂಡಲ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಭಾರತ ಸರಕಾರ ಟ್ವಿಟ್ಟರ್ ಗೆ ಸೂಚಿಸಿದೆ ಎಂದು ಜನಪ್ರಿಯ ರಾಜಕೀಯ ವ್ಯಂಗ್ಯಚಿತ್ರಕಾರ ಮಂಜುಲ್ ಹೇಳಿದ್ದರಲ್ಲದೆ ತಮಗೆ ಟ್ವಿಟ್ಟರ್ ನಿಂದ ದೊರೆತ ಇಮೇಲ್ ಅನ್ನು ಮಂಜುಲ್ ಕಳೆದ ಶುಕ್ರವಾರ ಶೇರ್ ಮಾಡಿದ್ದರು. ಜತೆಗೆ ʼಜೈ ಹೋ ಮೋದೀ ಜಿ ಕಿ ಸರ್ಕಾರ್ ಕಿʼ ಎಂದೂ ಬರೆದಿದ್ದರು.

- Advertisement -

ಮಂಜುಲ್ ಅವರು ಕಾನೂನು ತಜ್ಞರ ಸಲಹೆ ಪಡೆದು ಭಾರತ ಸರಕಾರ ಟ್ವಿಟ್ಟರ್ ಗೆ ಮಾಡಿರುವ ಮನವಿಯನ್ನು ಪ್ರಶ್ನಿಸಬಹುದು ಅಥವಾ ಈ ಸಮಸ್ಯೆಗೆ ಪರಿಹಾರಕ್ಕಾಗಿ ನಾಗರಿಕ ಸಮಾಜ ಸಂಘಟನೆಗಳನ್ನು ಸಂಪರ್ಕಿಸಬಹುದು ಇಲ್ಲವೇ ಸ್ವಯಂ ಆ ಕಂಟೆಂಟ್ ಡಿಲೀಟ್ ಮಾಡಬಹುದು ಎಂದು ಟ್ವಿಟ್ಟರ್ ಮಂಜುಲ್ ಅವರಿಗೆ ಕಳುಹಿಸಿದ್ದ ಇಮೇಲ್ ನಲ್ಲಿ ಹೇಳಿತ್ತು.



Join Whatsapp