ಯೋಜನೆ ರಹಿತ ಲಸಿಕೆ ಅಭಿಯಾನದಿಂದ ರೂಪಾಂತರ ತಳಿ ಸೃಷ್ಟಿ : ಪ್ರಧಾನಿಗೆ ತಜ್ಞರ ವರದಿ

Prasthutha|

ನವದೆಹಲಿ : ಯೋಜನೆ ರಹಿತ ಲಸಿಕೆ ಅಭಿಯಾನವು ಹೊಸ ಕೋವಿಡ್‌ ರೂಪಾಂತರ ತಳಿಗಳ ಸೃಷ್ಟಿಗೆ ಕಾರಣವಾಗಬಹುದು ಎಂದು ತಜ್ಞರ ತಂಡವೊಂದು ಎಚ್ಚರಿಕೆ ನೀಡಿದೆ. ವಿವೇಚನೆಯಿಲ್ಲದ, ಸಾಮೂಹಿಕ, ಅಪೂರ್ಣವಾದ ಲಸಿಕಾ ಅಭಿಯಾನವು ರೂಪಾಂತರ ತಳಿಗಳ ಹೊರಹೊಮ್ಮುವಿಕೆಯನ್ನು ಪ್ರಚೋದಿಸುತ್ತದೆ ಎದು ಏಮ್ಸ್‌ ವೈದ್ಯರನ್ನೊಳಗೊಂಡ ಕೋವಿಡ್‌ ರಾಷ್ಟ್ರೀಯ ಕಾರ್ಯಪಡೆಯ ಸದಸ್ಯರು, ಸಾರ್ವಜನಿಕ ಆರೋಗ್ಯ ತಜ್ಞರ ತಂಡ ಹೇಳಿದೆ. ಕೋವಿಡ್‌ ಸೋಂಕಿಗೆ ಒಳಗಾದವರಿಗೆ ಲಸಿಕೆ ಹಾಕುವ ಅಗತ್ಯವಿಲ್ಲ ಎಂದೂ ತಜ್ಞರು ಹೇಳಿರುವುದಾಗಿ ವರದಿಯೊಂದು ತಿಳಿಸಿದೆ.

- Advertisement -

ಮಕ್ಕಳನ್ನೂ ಒಳಗೊಂಡು, ದೊಡ್ಡ ಜನ ಸಮುದಾಯಕ್ಕೆ ಲಸಿಕೆ ನೀಡುವ ಬದಲು, ದುರ್ಬಲರು ಮತ್ತು ಸೋಂಕಿನ ಅಪಾವುಳ್ಳವರಿಗೆ ಮೊದಲು ಲಸಿಕೆ ನೀಡಬೇಕು. ಇದು ಈಗಿನ ಗುರಿಯಾಗಿರಬೇಕು ಎಂದು ತಜ್ಞರು ಸೂಚಿಸಿದ್ದಾರೆ.

ಎಲ್ಲಾ ವಯೋಮಾನದವರಿಗೆ ಲಸಿಕೆ ಹಾಕುವ ಬದಲು, ಸಾಂಕ್ರಾಮಿಕ ರೋಗ ಶಾಸ್ತ್ರೀಯ ಅಧ್ಯಯನ ವರದಿಗಳು ಮತ್ತು ರೋಗದ ವಿರುದ್ಧ ಸೆಣಸುತ್ತಿರುವವರ ಮಾರ್ಗದರ್ಶನ ಪಡೆದು ಲಸಿಕೆ ಅಭಿಯಾನ ಕೈಗೊಳ್ಳಬೇಕು. ದೇಶದಲ್ಲಿ ಸದ್ಯ ಅಂತಹ ಪರಿಸ್ಥಿತಿಯಿದೆ ಎಂದು ತಜ್ಞರು ಹೇಳಿದ್ದಾರೆ.



Join Whatsapp