ವೆಸ್ಟ್ ಬ್ಯಾಂಕ್: ಮೂವರು ಫೆಲೆಸ್ತೀನಿಯನ್ನರನ್ನು ಇಸ್ರೇಲ್ ಪಡೆ ಗುಂಡಿಟ್ಟು ಹತ್ಯೆಗೈದ ಘಟನೆ ಆಕ್ರಮಿತ ವೆಸ್ಟ್ ಬ್ಯಾಂಕ್ ನಲ್ಲಿ ನಡೆದಿದೆ. ಬಲಿಯಾದವರಲ್ಲಿ ಇಬ್ಬರು ಫೆಲೆಸ್ತೀನ್ ಪ್ರಾಧಿಕಾರದ ಮಿಲಿಟರಿ ಗುಪ್ತಚರ ಅಧಿಕಾರಿಗಳು ಎಂದು ತಿಳಿದುಬಂದಿದೆ.
ಅಧಿಕಾರಿಗಳಾದ 23 ವರ್ಷದ ಅದ್‌ಹಂ ಯಾಸರ್ ಆಲವಿ ಮತ್ತು 32 ವರ್ಷದ ತೈಸೀರ್ ಇಸ್ಸಾ ಮತ್ತು ಜಮೀಲ್ ಅಲ್-ಆಮುರಿ ಎಂಬ ಯುವಕ ಕೊಲ್ಲಲ್ಪಟ್ಟವರು. ಮೂವರೂ ಇಸ್ರೇಲಿ ಜೈಲಿನಲ್ಲಿದ್ದರು. ರಹಸ್ಯ ದಾಳಿ ನಡೆಸುವ ಮೂಲಕ ಅವರನ್ನು ಕೊಲೆ ಮಾಡಲಾಗಿದೆ ಎಂದು ಫೆಲೆಸ್ತೀನ್ ಮೂಲಗಳು ತಿಳಿಸಿವೆ.