ಲಕ್ಷದ್ವೀಪದಲ್ಲಿ ತೀವ್ರ ಪ್ರತಿಭಟನೆಗೆ ಮಣಿದ ಸರಕಾರ : ಪ್ರಮುಖ ಆದೇಶ ಹಿಂದೆಗೆದುಕೊಂಡ ಪ್ರಪುಲ್ ಪಟೇಲ್

Prasthutha|

ಲಕ್ಷದ್ವೀಪದಲ್ಲಿ ಗುಪ್ತಚರ ಸಂಗ್ರಹಕ್ಕಾಗಿ ಮೀನುಗಾರಿಕಾ ದೋಣಿಗಳಲ್ಲಿ ಸರಕಾರಿ ಅಧಿಕಾರಿಗಳನ್ನು ನಿಯೋಜಿಸುವ ಆದೇಶವನ್ನು ನೌಕರರು ಮತ್ತು ಸ್ಥಳೀಯರಿಂದ ವ್ಯಾಪಕ ಪ್ರತಿಭಟನೆ ವ್ಯಕ್ತವಾದ ನಂತರ ಲಕ್ಷದ್ವೀಪ ಆಡಳಿತ ಆದೇಶವನ್ನು ಹಿಂತೆಗೆದು ಕೊಂಡಿದೆ

- Advertisement -

ಅಲ್ಲದೆ ಹಡಗುಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಆದೇಶವನ್ನು ಸಹ ಹಿಂಪಡೆಯಲಾಗಿದೆ. ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರ “ಸುಧಾರಣೆಗಳ” ವಿರುದ್ಧ ದ್ವೀಪವಾಸಿಗಳ ಪ್ರತಿಭಟನೆಯ ಮಧ್ಯೆ, ಲಕ್ಷದ್ವೀಪ ಆಡಳಿತವು ಗುಪ್ತಚರ ಮಾಹಿತಿಗಾಗಿ ಸ್ಥಳೀಯ ಮೀನುಗಾರಿಕಾ ದೋಣಿಗಳಲ್ಲಿ ಸರ್ಕಾರಿ ಅಧಿಕಾರಿಗಳನ್ನು ನಿಯೋಜಿಸುವುದು ಸೇರಿದಂತೆ ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿತ್ತು.

ಹಡಗುಗಳಿಗೆ ಭದ್ರತೆಯನ್ನು ಹೆಚ್ಚಿಸುವ ಆದೇಶವನ್ನೂ ಹಿಂಪಡೆಯಲಾಗಿದೆ. ಆಡತಾಧಿಕಾರಿಯ ಹೊಸ ನಿರ್ದೇಶನಗಳನ್ನು, ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಾಲ್ “ಅಪಹಾಸ್ಯ” ಮಾಡಿ ತಕ್ಷಣ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು.

- Advertisement -

ಮೇ 28 ರಂದು, ಆಡಳಿತಾಧಿಕಾರಿಗಳ ಪ್ರಧಾನ ಕಾರ್ಯದರ್ಶಿ ಮತ್ತು ಸಲಹೆಗಾರರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಜವಾಬ್ದಾರಿಯುತ ಸರ್ಕಾರಿ ನೌಕರರನ್ನು ಸ್ಥಳೀಯ ಮೀನುಗಾರಿಕಾ ದೋಣಿಗಳಲ್ಲಿ ಗುಪ್ತಚರ ಸಂಗ್ರಹಣೆಗಾಗಿ ನಿಯೋಜಿಸಲು ನಿರ್ಧರಿಸಿತ್ತು. ಬಂದರುಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಮತ್ತು ಮಂಗಳೂರು ಮತ್ತು ಬೇಪೋರ್ ಬಂದರುಗಳಲ್ಲಿ ಹೆಲಿಬೇಸ್ ಮತ್ತು ಬ್ಯಾಗೇಜ್ ಮತ್ತು ಪ್ರಯಾಣಿಕರ ತಪಾಸಣೆ ಸೌಲಭ್ಯವನ್ನು ಸ್ಥಾಪಿಸಲು ಇದು ಆದೇಶಿಸಿತ್ತು.
ಲಕ್ಷದ್ವೀಪದಲ್ಲಿ “ಜನ ವಿರೋಧಿ” ನೀತಿಗಳ ಅನುಷ್ಠಾನದ ಬೆನ್ನಲ್ಲೇ ಲಕ್ಷದ್ವೀಪದ ಆಡಳಿತಗಾರ ಪ್ರಪುಲ್ ಪಟೇಲ್ ತೀವ್ರ ಟೀಕೆ ಮತ್ತು ಪ್ರತಿಭಟನೆಯನ್ನು ಎದುರಿಸುತ್ತಿದ್ದಾರೆ



Join Whatsapp