ದ್ವಿತೀಯ PUC ಪರೀಕ್ಷೆ ರದ್ದು | ಗೊಂದಲ ನಿವಾರಣೆಗೆ NSUI ಒತ್ತಾಯ

Prasthutha|

ಮಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿದ ರಾಜ್ಯ ಸರ್ಕಾರ ಅದರ ರೀತಿ ನಿಯಮಗಳ ಗೊಂದಲ ನಿವಾರಿಸಬೇಕೆಂದು NSUI ಒತ್ತಾಯಿಸಿದೆ.

- Advertisement -

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದು ಮಾಡಿದ್ದು, ಅದರ ರೀತಿ-ನಿಯಮ ಗೊಂದಲಗೀಡಾಗಿದೆ. ಅಲ್ಲದೆ, ಪುನಾವರ್ತನೆ ಮತ್ತು ಖಾಸಗಿಯಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸರಕಾರ ಇನ್ನೂ ಕೂಡ ಸ್ಪಷ್ಟ ನಿಲುವನ್ನು ನೀಡದೇ ಇರುವುದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಗೊಂದಲಗೀಡಾಗಿದ್ದಾರೆ ಎಂದು ರಾಜ್ಯ NSUI ಪ್ರಧಾನ ಕಾರ್ಯದರ್ಶಿ ಮನೀಶ್ ಜಿ ರಾಜ್ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 10ನೇ ತರಗತಿಯ ಪರೀಕ್ಷೆ ವಿಷಯದಲ್ಲಿ ಸರ್ಕಾರ ಅನೇಕ ಗೊಂದಲಕಾರಿ ನಿಲುವುಗಳನ್ನು ಕೈಗೊಳ್ಳುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಕುತ್ತಲ್ಲಿದೆ. ಆದಷ್ಟು ಶೀಘ್ರದಲ್ಲಿ ಈ ಎರಡು ಮೇಲ್ಕಂಡ ವಿಚಾರದಲ್ಲಿ ಸರ್ಕಾರ ಕೂಡಲೇ ಸರಿಯಾದ ನಿಲುಗಳನ್ನು ಕೈಗೊಂಡು ವಿದ್ಯಾರ್ಥಿಗಳನ್ನು ಉಳಿಸಬೇಕು ಎಂದು ಆಗ್ರಹಿಸಿದರು.

- Advertisement -

ಕಳೆದ ಒಂದು ವರ್ಷಗಳಿಂದ ಯಾವುದೇ ವರ್ಗದ ವಿದ್ಯಾರ್ಥಿ ವೇತನವನ್ನು ನೀಡಲಾಗಿಲ್ಲ. ವಿದ್ಯಾರ್ಥಿ ವೇತನವನ್ನೇ ಆಧರಿಸಿ ಶಿಕ್ಷಣ ಮುಂದುವರಿಸಿರುವ ಲಕ್ಷಾಂತರ ವಿದ್ಯಾರ್ಥಿಗಳು ಇದರಿಂದ ಕಂಗಾಲಾಗಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಪೋಷಕರು ಮತ್ತು ವಿದ್ಯಾರ್ಥಿಗಳ ಮೇಲೆ ಕಾಲೇಜು ಶುಲ್ಕವನ್ನು ಪಾವತಿಸುವಂತೆ ಒತ್ತಡವನ್ನು ಹೇರುತ್ತಿದ್ದು,

ಆನ್ ಲೈನ್ ಲಿಂಕ್ ಗಳನ್ನು ಕೂಡ ನೀಡಲಾಗುತ್ತಿಲ್ಲ. ಸರ್ಕಾರ 2 ವರ್ಷದ  ವಿದ್ಯಾರ್ಥಿ ವೇತನವನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.

    ದ.ಕ.ಜಿಲ್ಲಾ NSUI ಅಧ್ಯಕ್ಷ ಸವಾದ್ ಸುಳ್ಯ ಮಾತನಾಡಿ, ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ವಿದ್ಯಾರ್ಥಿಗಳ ಕಳೆದ ಸೆಮಿಸ್ಟರ್ ನ ಪರೀಕ್ಷೆಗಳನ್ನು ನಡೆಸದೆ ಮುಂದಿನ ಸೆಮಿಸ್ಟರ್ ನ ತರಗತಿಗಳನ್ನು ಆನ್ ಲೈನ್ ಮುಖಾಂತರ ಪ್ರಾರಂಭಿಸಿದ್ದು, ವಿದ್ಯಾರ್ಥಿಗಳು ಗೊಂದಲಕಾರಿಯಾಗಿದ್ದಾರೆ. ಓರ್ವ ವಿದ್ಯಾರ್ಥಿ ಎರಡೂ ಸೆಮಿಸ್ಟರ್ಗಳ ಪರೀಕ್ಷೆಯನ್ನ ಒಂದೇ ಸಮಯದಲ್ಲಿ ಬರೆಯುವಂತಾಗಿದ್ದು, ಕಳೆದ ಪದವಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದುಗೊಳಿಸಿ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸಬೇಕು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವ್ಯಾಕ್ಸಿನೇಷನ್ ಕಾಲೇಜು ಮಟ್ಟದಲ್ಲಿ ನೀಡಬೇಕಾಗಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ NSUI ವಿಟಿಯು ಉಸ್ತುವಾರಿ ಅನ್ವೀತ್ ಕಟೀಲ್, ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಅಫೀದ್, ಜಿಲ್ಲಾ ಉಪಾಧ್ಯಕ್ಷ ನಿಖಿಲ್ ಪೂಜಾರಿ, ವರುಣ್ ಕುಮಾರ್, ಶಫೀಕ್, ಅಬ್ದುಲ್ ರಾಝೀ ಉಪಸ್ಥಿತರಿದ್ದರು.



Join Whatsapp