ಭಾರತದಿಂದ ಯುಎಇಗೆ ವಿಮಾನ ಪ್ರಯಾಣ ರದ್ದು | ಅವಧಿ ವಿಸ್ತರಿಸಿ ಆದೇಶ

Prasthutha|

ಭಾರತ-ಯುಎಇ ವಿಮಾನಗಳನ್ನು ಜುಲೈ 6 ರವರೆಗೆ ಸ್ಥಗಿತಗೊಳಿಸಲಾಗಿದ್ದು ಪ್ರಯಾಣ ದಿನಾಂಕವನ್ನು ಮುಂದೂಡಿ ಟಿಕೆಟ್‌ಗಳನ್ನು ಮರು ನಿಗದಿಪಡಿಸುವಂತೆ ವಿಮಾನಯಾನ ಪ್ರಯಾಣಿಕರಿಗೆ ಸೂಚಿಸಲಾಗಿದೆ. ಈ ಕುರಿತು ಏರ್ ಇಂಡಿಯಾ ಎಕ್ಸ್ಪ್ರೆಸ್ಸ್ ಟ್ವೀಟ್ ಮೂಲಕ ಪ್ರಯಾಣಿಕರಿಗೆ ತಿಳಿಸಿದೆ.

- Advertisement -

ಜುಲೈ 6 ರವರೆಗೆ ಯುಎಇಗೆ ಭಾರತದಿಂದ ಎಲ್ಲಾ ಒಳಬರುವ ಪ್ರಯಾಣಿಕರ ಸಂಚಾರವನ್ನು ಸ್ಥಗಿತಗೊಳಿಸಿದೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ಹೇಳಿದೆ.  ಈ ಬಗ್ಗೆ ವಿಮಾನಯಾನ ಸಂಸ್ಥೆ ಮಂಗಳವಾರ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದು, ಯುಎಇಯ ನಾಗರಿಕ ವಿಮಾನಯಾನ ಪ್ರಾಧಿಕಾರವು ಜುಲೈ ಆರರ ವರೆಗೆ ಅಮಾನತು ವಿಸ್ತರಿಸಿದೆ ಎಂದು ಅದು ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಭಾರತದಿಂದ ಪ್ರಯಾಣಿಕರ ವಿಮಾನಗಳು ಕನಿಷ್ಠ ಜೂನ್ 30 ರವರೆಗೆ ಸ್ಥಗಿತಗೊಳ್ಳುತ್ತವೆ ಎಂದು ದುಬೈನ ಎಮಿರೇಟ್ಸ್ ಈ ಹಿಂದೆ ತಿಳಿಸಿತ್ತು. ಭಾರತದಿಂದ ಯುಎಇಗೆ ಒಳಬರುವ ಪ್ರಯಾಣಿಕರನ್ನು ಏಪ್ರಿಲ್ 24 ರಿಂದ ಸ್ಥಗಿತಗೊಳಿಸಲಾಗಿತ್ತು. ಯುಎಇಯ ರಾಷ್ಟ್ರೀಯ ತುರ್ತು ಬಿಕ್ಕಟ್ಟು ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರವು (ಎನ್‌ಸಿಇಎಂಎ) ಮೇ 4 ರಂದು ವಿಸ್ತರಿಸಿತು. ಪ್ರಸ್ತುತ ಭಾರತದ ಮೇಲೆ ಪರಿಣಾಮ ಬೀರುವ ಕೋವಿಡ್ -19 ರ ಎರಡನೇ ಅಲೆಯ ಕಾರಣದಿಂದಾಗಿ ಇದನ್ನು ಜುಲೈ 6ರ ವರೆಗೆ ವಿಸ್ತರಿಸಲಾಗಿದೆ



Join Whatsapp