ಅಹಮದಾಬಾದ್ : ಮತಾಂತರ ಉದ್ದೇಶದಿಂದ ಬಲವಂತವಾಗಿ ಮದುವೆಯಾಗುವುದನ್ನು ತಡೆಯುವ ಉದ್ದೇಶದ ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯ್ದೆ ಜೂ.15ರಿಂದ ಜಾರಿಯಾಗಲಿದೆ. ಬಿಜೆಪಿಗರು ಪ್ರತಿಪಾದಿಸುವ ʼಲವ್ ಜಿಹಾದ್ʼ ಅನ್ನು ತಡೆಯುವ ಉದ್ದೇಶದ ಕಾನೂನು ಇದಾಗಿದೆ.
ಮಸೂದೆ ಪ್ರಕಾರ, ಮತಾಂತರ ಉದ್ದೇಶದಿಂದ ಬಲವಂತ ವಿವಾಹವಾದ ಪ್ರಕರಣಗಳಲ್ಲಿ ಗರಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಅವರು ಈ ಕಾನೂನು ಜಾರಿಗೆ ತರಲು ನಿರ್ಧರಿಸಿದ್ದು, ಜೂ.೧೫ರಿಂದ ಇದು ಜಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಏ.1ರಂದು ಈ ಕಾನೂನಿಗೆ ಗುಜರಾತ್ ವಿಧಾನಸಭೆಯಲ್ಲಿ ಬಹುಮತದೊಂದಿಗೆ ಅಂಗೀಕಾರ ಪಡೆಯಲಾಗಿತ್ತು. ನಂತರ ಮೇ ತಿಂಗಳಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಅನುಮೋದನೆ ನೀಡಿದ್ದರು.