ನವದೆಹಲಿ : ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟರ್ ಖಾತೆಯ ವೆರಿಫೈಡ್ ಬ್ಲೂ ಬ್ಯಾಜ್ ಅನ್ನು ತೆಗೆಯಲಾಗಿದೆ. ಕೇಂದ್ರದ ಬಿಜೆಪಿ ಸರಕಾರದ ಹೊಸ ಐಟಿ ನಿಯಮಗಳ ಬಗ್ಗೆ ಸಾಮಾಜಿಕ ಜಾಲತಾಣ ವೇದಿಕೆಗಳು ಸಂಘರ್ಷಕ್ಕೆ ಇಳಿದಿರುವ ಹೊತ್ತಲ್ಲಿ, ಟ್ವಿಟರ್ ವೆಂಕಯ್ಯ ನಾಯ್ಡು ಅವರ ಖಾತೆಯಿಂದ ಬ್ಲೂ ಟಿಕ್ ತೆಗೆದಿರುವುದು ಚರ್ಚೆಗೆ ಕಾರಣವಾಗಿದೆ.
ಉಪರಾಷ್ಟ್ರಪತಿಗಳ ಕಚೇರಿ ನಿರ್ವಹಿಸುವ ವೆಂಕಯ್ಯ ನಾಯ್ಡು ಅವರ ಅಧಿಕೃತ ಖಾತೆ ವೈಸ್ ಪ್ರೆಸಿಡೆಂಟ್ ಆಫ್ ಇಂಡಿಯಾ @ವಿಪಿ ಸೆಕ್ರೆಟರಿಯೇಟ್ ನಲ್ಲಿ ಬ್ಲೂಟಿಕ್ ಈಗಲೂ ಹಾಗೆಯೇ ಇದೆ.
ನಾಯ್ಡು ಅವರ ವೈಯಕ್ತಿಕ ಖಾತೆ 1.3 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದು, ಕೊನೆಯ ಟ್ವೀಟ್ ಕಳೆದ ವರ್ಷದ ಜು.23ರಂದು ಮಾಡಲಾಗಿದೆ.