ಬ್ರಿಟನ್‌ ನಲ್ಲಿ ಕೋವಿಡ್‌ ರೂಪಾಂತರಿ ಡೆಲ್ಟಾ ವೈರಸ್‌ | ಆಸ್ಪತ್ರೆ ದಾಖಲಾಗುತ್ತಿರುವವರ ಸಂಖ್ಯೆ ದಿಢೀರ್‌ ಏರಿಕೆ

Prasthutha|

ಲಂಡನ್‌ : ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್‌ ವೈರಸ್‌ ಡೆಲ್ಟಾ ರೂಪಾಂತರಿ ಈಗ ಬ್ರಿಟನ್‌ ನಲ್ಲಿ ಭಾರೀ ಮಾರಣಾಂತಿಕವಾಗಿ ಕಾಡಲಾರಂಭಿಸಿದೆ. ಸೋಂಕಿಗೊಳಗಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

- Advertisement -

ಡೆಲ್ಟಾ ರೂಪಾಂತರಿ ವೈರಸ್‌ ನಿಂದ ಕಳೆದ ಒಂದು ವಾರದಲ್ಲಿ 5,472 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಮಾರು 12,431 ಮಂದಿ ಸೋಂಕಿಗೆ ಗುರಿಯಾಗಿದ್ದಾರೆ. ಈ ರೂಪಾಂತರವು ಈಗ ಬ್ರಿಟನ್‌ ನಾದ್ಯಂತ ಪ್ರಬಲವಾಗಿ ಹರಡುತ್ತಿದೆ ಎಂದು ಬ್ರಿಟನ್‌ ಆರೋಗ್ಯ ಭದ್ರತಾ ಏಜೆನ್ಸಿಯ ಮುಖ್ಯ ಕಾರ್ಯ ನಿರ್ವಾಹಕ ಡಾ. ಜೆನ್ನಿ ಹ್ಯಾರಿಸ್‌ ಹೇಳಿದ್ದಾರೆ.

ಡೆಲ್ಟಾ ರೂಪಾಂತರಿಯಿಂದಾಗಿ ಒಂದೇ ವಾರದಲ್ಲಿ 278 ಮಂದಿ ಗಂಭೀರ ಸ್ಥಿತಿಗೆ ತಲುಪಿದ್ದಾರೆ. ಹೀಗಾಗಿ ಸಾಧ್ಯವಾದಷ್ಟು ಮನೆಯಲ್ಲೇ ಇರಿ, ಅತಿ ಅನಿವಾರ್ಯವಾದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ. ಕೋವಿಡ್‌ ನಿಯಮಗಳನ್ನು ಪಾಲಿಸಿ ಎಂದು ಎಂದು ಇಲಾಖೆ ವಿನಂತಿಸಿದೆ.



Join Whatsapp