ರಷ್ಯಾ ಮಧ್ಯಸ್ಥಿಕೆಯಲ್ಲಿ ಫೆಲೆಸ್ತೀನ್ ನ ಫತಹ್ – ಹಮಾಸ್ ಮಾತುಕತೆಗೆ ವೇದಿಕೆ ಸಿದ್ಧ

Prasthutha|

ಫೆಲೆಸ್ತೀನ್ ನ ಪ್ರತಿರೋಧ ಚಳುವಳಿಯಾದ ಫತಹ್ ನೊಂದಿಗೆ ಮಾತುಕತೆ ನಡೆಸಲು ಸಮ್ಮತಿ ಸೂಚಿಸಿರುವ ಹಮಾಸ್, ಮಾತುಕತೆಗಾಗಿ ಮಾಸ್ಕೋಗೆ ಭೇಟಿ ನೀಡಬೇಕೆಂಬ ರಷ್ಯಾದ ಆಹ್ವಾನವನ್ನು ನಿನ್ನೆ ಸ್ವೀಕರಿಸಿದೆ ಎಂದು ವಕ್ತಾರ ಹಝಮ್ ಖಾಸಿಮ್ ತಿಳಿಸಿದ್ದಾರೆ.

- Advertisement -

ಫೆಲೆಸ್ತೀನ್ ನ ಈ ಎರಡು ಬಣಗಳ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಪ್ರಕಟಿಸಿದ ಬೆನ್ನಲ್ಲೇ ಹಮಾಸ್ ಈ ಪ್ರತಿಕ್ರಿಯೆ ನೀಡಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಸೇಂಟ್ ಪೀಟರ್ಸ್ ಬರ್ಗ್ ಇಂಟರ್ ನ್ಯಾಷನಲ್ ಎಕನಾಮಿಕ್ ಫೋರಂನ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಷ್ಯಾದ ಉಪ ವಿದೇಶಾಂಗ ಸಚಿವ ಮಿಖಾಯಿಲ್ ಬೊಗ್ಡಾನೋವ್ ಮಾತನಾಡಿ, ಫತಹ್ ಮತ್ತು ಹಮಾಸ್ ಸೇರಿದಂತೆ ವಿವಿಧ ಫೆಲೆಸ್ತೀನಿಯನ್ ಬಣಗಳ ಪ್ರತಿನಿಧಿಗಳು ಮಾತುಕತೆ ನಡೆಸಲು ಮಾಸ್ಕೋಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.

- Advertisement -

ಮಧ್ಯಪ್ರಾಚ್ಯ ಮತ್ತು ಆಫ್ರಿಕಾಕ್ಕೆ ರಷ್ಯಾ ಅಧ್ಯಕ್ಷರ ವಿಶೇಷ ರಾಯಭಾರಿಯಾಗಿರುವ ಬೊಗ್ಡಾನೋವ್, ತಮ್ಮ ದೇಶವು “ಫತಹ್ ಮತ್ತು ಹಮಾಸ್ ಮತ್ತು ಇತರ ಫೆಲೆಸ್ತೀನಿಯನ್ ಬಣಗಳೊಂದಿಗೆ ಇನ್ನೂ ಸಂಪರ್ಕದಲ್ಲಿದೆ” ಎಂದು ಹೇಳಿದ್ದಾರೆ.

ರಷ್ಯಾವು “ಫೆಲೆಸ್ತೀನಿಯನ್-ಇಸ್ರೇಲಿ ಮತ್ತು ಫೆಲೆಸ್ತೀನ್-ಫೆಲೆಸ್ತೀನಿಯನ್ ಗುಂಪುಗಳ ನಡುವೆ ಸಭೆಗಳನ್ನು ನಡೆಸಲು ಶಾಶ್ವತ ಯೋಜನೆಗಳನ್ನು ಹೊಂದಿದೆ, ಅವರು ಮಾತುಕತೆಗೆ ಇಚ್ಛಿಸಿದರೆ ನಾವು ಯಾವಾಗಲೂ ಸಿದ್ಧರಿದ್ದೇವೆ ಮತ್ತು ಅಂತಹ ಸಭೆಗಳು ನಡೆಸುವುದು ಅನುಕೂಲ ಎಂದು ನಾವು ನಂಬಿದ್ದೇವೆ ಎಂದು ಬೊಗ್ಡಾನೋವ್ ತಿಳಿಸಿದ್ದಾರೆ.



Join Whatsapp