ಲಕ್ಷದ್ವೀಪ ಜನರ ಮೂಲಭೂತ ಹಕ್ಕುಗಳ ಮೇಲೆ ಫ್ಯಾಸಿಸ್ಟ್ ನೀತಿ ಹೇರಿಕೆ: ಇರ್ಷಾದ್ ದಾರಿಮಿ ಖಂಡನೆ

Prasthutha|

ಲಕ್ಷದ್ವೀಪದಲ್ಲಿ ಜನರ ಮೂಲಭೂತ ಹಕ್ಕುಗಳನ್ನು ಕಸಿಯಲು ಪ್ರಯತ್ನಿಸುತ್ತಿರುವ ಬಿಜೆಪಿ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರ ಸರ್ವಾಧಿಕಾರಿ ಕ್ರಮಗಳ ಬಗ್ಗೆ ಇಮ್ದಾದ್ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್ ಮಿತ್ತಬೈಲ್ ಇದರ ಮಾರ್ಗದರ್ಶಕರಾದ  ಮಿತ್ತಬೈಲ್ ಮರ್ಹೂಂ ಜಬ್ಬಾರ್ ಉಸ್ತಾದರ ಸುಪುತ್ರ ಬಹು ಇರ್ಷಾದ್ ದಾರಿಮಿ ಮಿತ್ತಬೈಲ್ (ಲಕ್ಷದ್ವೀಪ) ಅವರು ತೀವ್ರವಾಗಿ ಖಂಡಿಸಿದ್ದಾರೆ.

- Advertisement -

ಕರಾಳ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಶಾಂತಿ-ಸೌಹಾರ್ದತೆಗೆ, ಪರಸ್ಪರ ಸಹಬಾಳ್ವೆಯ ಜೀವನ ನಡೆಸುತ್ತಿದ್ದ ಲಕ್ಷದ್ವೀಪ ಜನರ ಮೂಲಭೂತ ಹಕ್ಕುಗಳನ್ನು ಕಸಿಯಲಾಗುತ್ತಿದೆ, ಇತಿಹಾಸದುದ್ದಕ್ಕೂ ಸಂರಕ್ಷಿಸುತ್ತಾ ಬಂದಿರುವ ಅಲ್ಲಿನ ಸಂಸ್ಕೃತಿ, ಸಂಪ್ರದಾಯಗಳನ್ನು ಬಲವಂತವಾಗಿ ಕಿತ್ತೊಗೆಯಲು ಪ್ರಯತ್ನಿಸುತ್ತಿದ್ದಾರೆ, ಪ್ರಾಚೀನ ಆರಾಧನಾಲಯಗಳನ್ನು ನಾಶಪಡಿಸಲು ಮುಂದಾಗಿರುವ ಆಡಳಿತಾಧಿಕಾರಿಯ ಸರ್ವಾಧಿಕಾರಿ ಧೋರಣೆಗಳು ಅಲ್ಲಿನ ಜನರನ್ನು ಕಠಿಣ ಪರಿಸ್ಥಿತಿಗೆ ತಂದೊಡ್ಡಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸರಕಾರ ಈ ಕೂಡಲೇ ಆಡಳಿತಾಧಿಕಾರಿಯ ವಿವಾದಾತ್ಮಕ ಆದೇಶಗಳನ್ನು ಹಿಂಪಡೆಯಬೇಕು ಹಾಗೂ ಲಕ್ಷ ದ್ವೀಪದಲ್ಲಿ ಈ ಹಿಂದೆ ಇದ್ದಂತಹ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಜನಸಾಮಾನ್ಯರಿಗೆ ಮರಳಿ ದೊರಕುವತಾಗಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.



Join Whatsapp