ಪ್ರಧಾನಿ ಮೋದಿಯವರೇ ಇಷ್ಟೊಂದು ಹೋಂ ವರ್ಕ್‌ ಯಾಕೆ? : 6ರ ಹರೆಯದ ಮುಗ್ಧ ಬಾಲಕಿಯ ವೀಡಿಯೊ ವೈರಲ್

Prasthutha|

ನವದೆಹಲಿ : ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲೇ ಉಳಿದಿದ್ದಾರೆ. ಈ ನಡುವೆ, ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ಹೊರಗಿಡಬಾರದು ಎಂಬ ಉದ್ದೇಶದಿಂದ ಶಾಲೆಗಳು ಆನ್‌ ಲೈನ್‌ ತರಗತಿಗಳನ್ನು ಮಾಡುತ್ತಿವೆ. ಆದರೆ, ಈ ಆನ್‌ ಲೈನ್‌ ಕ್ಲಾಸ್‌, ಅಲ್ಲದೆ, ಶಿಕ್ಷಕರು ನೀಡುತ್ತಿರುವ ಹೋಂ ವರ್ಕ್‌ ಗಳಿಂದ ಬೇಸತ್ತಿರುವ ಕಾಶ್ಮೀರಿ ಬಾಲಕಿಯೊಬ್ಬಳು, ಪ್ರಧಾನಿ ನರೇಂದ್ರ ಮೋದಿಗೆ ವೀಡಿಯೊ ಸಂದೇಶವನ್ನು ನೀಡಿರುವುದು ದೇಶಾದ್ಯಂತ ಸುದ್ದಿಯಾಗಿದೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದೀಗ, ಈ ವೀಡಿಯೊಗೆ ಜಮ್ಮು-ಕಾಶ್ಮೀರದ ಆಡಳಿತಾಧಿಕಾರಿ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಪ್ರತಿಕ್ರಿಯಿಸಿದ್ದಾರೆ.

- Advertisement -

ವಿದ್ಯಾರ್ಥಿನಿಯ ಬೇಡಿಕೆಗೆ ಸ್ಪಂಧಿಸಿರುವ ಮನೋಜ್‌ ಸಿನ್ಹಾ, ಎರಡು ದಿನಗಳೊಳಗೆ ಮಕ್ಕಳಿಗೆ ಹೋಂ ವರ್ಕ್‌ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲು ಸಲಹಗಳನ್ನು ನೀಡುವಂತೆ ಶಿಕ್ಷಣ ಇಲಾಖೆಗೆ ನಿರ್ದೇಶಿಸಿದ್ದಾರೆ. ಈ ಕುರಿತು ಅವರು ಟ್ವೀಟ್‌ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ವೀಡಿಯೊದಲ್ಲಿ ಮಾತನಾಡಿರುವ ಬಾಲಕಿ, ನಾನು ಆರು ವರ್ಷಗಳ ಬಾಲಕಿ, ನಮ್ಮ ಸೀನಿಯರ್‌ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೋಂ ವರ್ಕ್‌ ಕೊಡಿ. 7-8ನೇ ತರಗತಿ ವಿದ್ಯಾರ್ಥಿಗಳಿಗೆ ಹೆಚ್ಚಿನ ವರ್ಕ್‌ ಕೊಡಿ. ನಮಗೆ ಕೊಡಬೇಡಿ ಎಂದು ಪ್ರಧಾನಿ ಮೋದಿಯವರನ್ನು ವಿನಂತಿಸಿದ್ದಾಳೆ. ಅಲ್ಲದೆ, ನಮಗೆ ಬ್ಯಾಕ್‌ ಟು ಬ್ಯಾಕ್‌ ಕ್ಲಾಸ್‌ ಗಳನ್ನು ತೆಗೆದುಕೊಳ್ಳುತ್ತಾರೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಬಿಡುವಿಲ್ಲದೆ ತರಗತಿಯನ್ನು ತೆಗೆದುಕೊಳ್ಳುತ್ತಾರೆ ಎಂದು ವಿದ್ಯಾರ್ಥಿನಿ ಮುಗ್ಧತೆಯಿಂದ ದೂರಿದ್ದಾಳೆ. ಈ ವೀಡಿಯೊ ಈಗ ಎಲ್ಲೆಡೆ ವೈರಲ್‌ ಆಗಿದೆ.

https://youtu.be/pLoVG86OgyU


Join Whatsapp