ಕೇಂದ್ರದ ಲಸಿಕೆ ನೀತಿಗೆ ಸುಪ್ರೀಂ ತರಾಟೆ; ರಾಜ್ಯಗಳೇಕೆ ಹೆಚ್ಚಿನ ಬೆಲೆ ಪಾವತಿಸಬೇಕು? : ನ್ಯಾಯಪೀಠ ಪ್ರಶ್ನೆ

Prasthutha|

ಕೇಂದ್ರ ಸರ್ಕಾರದ ಕೊರೊನಾ ಲಸಿಕೆ ನೀತಿಯನ್ನು ಪ್ರಶ್ನಿಸಿರುವ ಸುಪ್ರೀಂಕೋರ್ಟ್, ವಿವಿಧ ವಯೋಮಾನದವರಿಗೆ ಲಸಿಕೆ ಪೂರೈಕೆಯಲ್ಲಿ ವ್ಯತ್ಯಾಸ ಏಕಿದೆ? ಲಸಿಕೆಗೆ ಏಕರೂಪದ ಬೆಲೆ ಏಕಿಲ್ಲ, ಮತ್ತು ದೇಶದ ಗ್ರಾಮೀಣ ಪ್ರದೇಶಗಳಲ್ಲಿರುವವರಿಗೆ ಲಸಿಕೆ ನೀಡಲಾಗಿದೆಯೆ ? ಎಂದು ಪ್ರಶ್ನೆಗಳ ಸುರಿಮಳೆಗೈದಿದೆ.

- Advertisement -

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದಲ್ಲಿ ಮತ್ತು ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ಎಲ್ ನಾಗೇಶ್ವರ ರಾವ್ ಅವರನ್ನೊಳಗೊಂಡ ನ್ಯಾಯಪೀಠವು, ಕೊರೋನವೈರಸ್ ಸೋಂಕಿತರಿಗೆ ಅಗತ್ಯ ಔಷಧಿಗಳು, ಲಸಿಕೆಗಳು ಮತ್ತು ಆಮ್ಲಜನಕವನ್ನು ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದೆ.

ಲಸಿಕೆಗಳನ್ನು ಖರೀದಿಸಲು ಎರಡೆರಡು ನೀತಿ ಏಕೆ ? ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅವರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿದರು.

- Advertisement -

“ಕೇಂದ್ರ ಸರ್ಕಾರವು ದೊಡ್ಡ ಪ್ರಮಾಣದಲ್ಲಿ ಲಸಿಕೆ ಖರೀದಿಸುವುದರಿಂದ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಅವರು ಉತ್ತರಿಸಿದರು.

“ಇದು ನಿಜವಾದರೆ, ರಾಜ್ಯಗಳು ಏಕೆ ಹೆಚ್ಚಿನ ಬೆಲೆ ನೀಡಬೇಕು? ದೇಶಾದ್ಯಂತ ಲಸಿಕೆಗಳಿಗೆ ಏಕರೂಪ ಬೆಲೆ ಇರಬೇಕು. ಸಾಂಕ್ರಾಮಿಕ ರೋಗವು ಕಳೆದ ಎರಡು ತಿಂಗಳಲ್ಲಿ ಹೆಚ್ಚಾಗಿದೆ ಎಂದು ಪೀಠ ಹೇಳಿತು.

  ಪರಿಸ್ಥಿತಿ ಕ್ರಿಯಾತ್ಮಕವಾಗಿದೆ ಎಂದು ನೀವು ಹೇಳುತ್ತಲೇ ಇದ್ದೀರಿ, ಆದರೆ ನೀವು ನಿಮ್ಮ ಕಿವಿಗಳನ್ನು ವಾಸ್ತವತೆಯೆಡೆಗೆ ತೆರೆದುಕೊಳ್ಳಬೇಕು. ನೀವು ಡಿಜಿಟಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಎಂದು ಹೇಳುತ್ತಲೇ ಇರುತ್ತೀರಿ, ಆದರೆ ನೆಲದ ವಾಸ್ತವತೆಗಳ ಬಗ್ಗೆ ನಿಮಗೆ ತಿಳಿದಿಲ್ಲ. ಜಾರ್ಖಂಡ್ ನ ಒಬ್ಬ ಬಡ ಕಾರ್ಮಿಕ ಲಸಿಕೆಗಾಗಿ ತನ್ನ ಹೆಸರನ್ನು ಹೇಗೆ ನೋಂದಾಯಿಸಿಕೊಳ್ಳಬೇಕು ? ಎಂದು ಚಂದ್ರಚೂಡ್ ಪ್ರಶ್ನಿಸಿದರು.

ನಮ್ಮ ಸಂವಿಧಾನವು ಭಾರತ, ರಾಜ್ಯಗಳ ಒಕ್ಕೂಟ ಎಂದು ಹೇಳುತ್ತದೆ. ನಾವು ಒಕ್ಕೂಟದ ನಿಯಮವನ್ನು ಅನುಸರಿಸುತ್ತೇವೆ.  ಭಾರತ ಸರ್ಕಾರ ಲಸಿಕೆಗಳನ್ನು ಸಂಗ್ರಹಿಸಿ ರಾಜ್ಯಗಳಿಗೆ ವಿತರಿಸಬೇಕು ಎಂದು ಹೇಳಿದರು.



Join Whatsapp